ಅಪರಿಚಿತ ಮಹಿಳೆಯನ್ನು ‘ಡಾರ್ಲಿಂಗ್’ ಎಂದು ಕರೆಯುವುದು ಲೈಂಗಿಕ ಕಿರುಕುಳ : ಹೈಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ : ಅಪರಿಚಿತ ಮಹಿಳೆಯನ್ನು “ಡಾರ್ಲಿಂಗ್” ಎಂದು ಕರೆಯುವುದು ಲೈಂಗಿಕ ಕಿರುಕುಳ ಎಂದು ಕಲ್ಕತ್ತಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಪರಿಚಿತ ಮಹಿಳೆಯನ್ನು “ಡಾರ್ಲಿಂಗ್” ಎಂದು ಕರೆಯುವುದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಎ (ಮಹಿಳೆಯ ಗೌರವಕ್ಕೆ ಧಕ್ಕೆ) ಮತ್ತು 509 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ ಎಂದು ಕಲ್ಕತ್ತಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕುಡಿದ ಮತ್ತಿನಲ್ಲಿ ಮಹಿಳಾ ಕಾನ್ಸ್ಟೇಬಲ್ ಒಬ್ಬರನ್ನು ‘ಡಾರ್ಲಿಂಗ್’ ಎಂದು ಕರೆದಿದ್ದ ಜನಕ್ ರಾಮ್ ಎಂಬಾತನ ಶಿಕ್ಷೆಯನ್ನು ಎತ್ತಿಹಿಡಿದ ಹೈಕೋರ್ಟ್ ನ ಪೋರ್ಟ್ ಬ್ಲೇರ್ ಪೀಠದ ಏಕಸದಸ್ಯ ನ್ಯಾಯಮೂರ್ತಿ ಜೇ ಸೇನ್ಗುಪ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೆಕ್ಷನ್ 354 ಎ ಲೈಂಗಿಕ ಬಣ್ಣದ ಹೇಳಿಕೆಗಳ ಬಳಕೆಯನ್ನು ದಂಡಿಸುತ್ತದೆ ಎಂದು ನ್ಯಾಯಮೂರ್ತಿ ಸೇನ್ ಗುಪ್ತಾ ಹೇಳಿದರು.

ಪೊಲೀಸ್ ಕಾನ್ಸ್ಟೇಬಲ್ ಆಗಿರಲಿ ಅಥವಾ ಯಾರೇ ಆಗಿರಲಿ ಬೀದಿಯಲ್ಲಿ ಅಪರಿಚಿತ ಮಹಿಳೆಯನ್ನು ‘ಡಾರ್ಲಿಂಗ್’ ಎಂಬ ಪದದಿಂದ ಸಂಬೋಧಿಸುವುದು ಸಂಪೂರ್ಣವಾಗಿ ಆಕ್ರಮಣಕಾರಿಯಾಗಿದೆ ಮತ್ತು ಬಳಸಿದ ಪದವು ಮೂಲಭೂತವಾಗಿ ಲೈಂಗಿಕ ಬಣ್ಣದ ಹೇಳಿಕೆಯಾಗಿದೆ” ಎಂದು ನ್ಯಾಯಪೀಠ ಹೇಳಿದೆ.ಅಪರಿಚಿತ ಮಹಿಳೆಯರಿಗೆ ‘ಡಾರ್ಲಿಂಗ್’ ಎಂಬ ಪದದ ಬಳಕೆ ಮಾಡಬಾರದು ಎಂದು ಕೋರ್ಟ್ ಹೇಳಿದೆ.

ಐಪಿಸಿ ಸೆಕ್ಷನ್ 354 ಎ (1) (4) ಮತ್ತು 509 (ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶದ ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಮಾಯಾಬಂದರ್ ಪೊಲೀಸ್ ಠಾಣೆಯಲ್ಲಿ ಜನಕ್ ರಾಮ್  ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಇದರ ವಿರುದ್ಧ ಜನಕ್ ರಾಮ್ ಅವರ ಮೇಲ್ಮನವಿಯನ್ನು ಉತ್ತರ ಮತ್ತು ಮಧ್ಯ ಅಂಡಮಾನ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು 2023 ರ ನವೆಂಬರ್ ನಲ್ಲಿ ತಿರಸ್ಕರಿಸಿದರು. ನಂತರ ಜನಕ್ ರಾಮ್ಅ ರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ನಲ್ಲಿ ಸಲ್ಲಿಸಿದರು.

ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೇನ್ಗುಪ್ತಾ ನೇತೃತ್ವದ ನ್ಯಾಯಪೀಠವು ಜನಕ್ ರಾಮ್ ನಿಜವಾಗಿಯೂ ಮಹಿಳಾ ಕಾನ್ಸ್ಟೇಬಲ್ ಅನ್ನು ಆರೋಪಿಸಿರುವ ರೀತಿಯಲ್ಲಿ ಸಂಬೋಧಿಸಿದ್ದಾರೆ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ಗಮನಿಸಿದರು. ಕೆಳ ನ್ಯಾಯಾಲಯದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಒಂದು ತಿಂಗಳ ಜೈಲು ಶಿಕ್ಷೆಗೆ ಇಳಿಸಿ ಆದೇಶ ಹೊರಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read