ಎಚ್ಚರ: ಬ್ಯಾಂಕ್ ಖಾತೆಗೆ ಕನ್ನ ಹಾಕಲು ಹೊಸ ಪ್ಲಾನ್ ; ಕರೆ ಜೋಡಣೆ ಜಾಲಕ್ಕೆ ಸಿಲುಕಿದ್ರೆ ಕ್ಷಣಾರ್ಧದಲ್ಲಿ ಖಾತೆ ಖಾಲಿ !

ಈಗ ಆನ್‌ಲೈನ್ ವಂಚನೆಗಳು ಜಾಸ್ತಿಯಾಗ್ತಿವೆ. ಓಟಿಪಿ, ಡಿಜಿಟಲ್ ಬಂಧನ, ವಾಟ್ಸಾಪ್ ಲಿಂಕ್ ವಂಚನೆಗಳಾದ ಮೇಲೆ, ಇವಾಗ “ಕರೆ ಜೋಡಣೆ ವಂಚನೆ” ಅಂತಾ ಹೊಸ ಮೋಸ ಶುರುವಾಗಿದೆ. ಈ ಬಗ್ಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಯುಪಿಐ ಬಳಸೋರಿಗೆ ಅಲರ್ಟ್ ನೀಡಿದೆ.

ಮೋಸದ ವಿಧಾನ

  • ನಿಮಗೆ ಫೋನ್ ಮಾಡಿ, ಜಾಬ್ ಆಫರ್, ಲಕ್ಕಿ ಡ್ರಾ, ಪಾರ್ಸೆಲ್ ಬಂದಿದೆ, ಸರ್ಕಾರಿ ಆಫೀಸ್ ಇಂದ ದಾಖಲೆ ಚೆಕ್ ಮಾಡ್ಬೇಕು, ಬ್ಯಾಂಕ್ ಖಾತೆ ಡೀಟೇಲ್ಸ್ ಅಪ್ಡೇಟ್ ಮಾಡ್ಬೇಕು ಅಂತಾ ಆಮಿಷ ತೋರಿಸ್ತಾರೆ.
  • ಮಾತಾಡ್ತಾ ಇರಬೇಕಾದ್ರೆ ಇನ್ನೊಂದು ಕಾಲ್ ಕನೆಕ್ಟ್ ಮಾಡ್ಬೇಕು ಅಂತಾ ಕೇಳ್ತಾರೆ.
  • ಕನೆಕ್ಟ್ ಮಾಡೋ ಕಾಲ್ ನಿಮ್ಮ ಬ್ಯಾಂಕ್ ಇಂದ ಬರೋ ಓಟಿಪಿ ಕಾಲ್ ಆಗಿರುತ್ತೆ.
  • ನೀವು ಕಾಲ್ ಕನೆಕ್ಟ್ ಮಾಡಿದ ತಕ್ಷಣ, ಓಟಿಪಿ ಅವರ ಕೈ ಸೇರಿ ನಿಮ್ಮ ಖಾತೆಯಿಂದ ದುಡ್ಡು ಎಗರಿಸ್ತಾರೆ.

ರಕ್ಷಣೆ ಹೇಗೆ ?

  • ಯಾವ ಅಪರಿಚಿತ ಕಾಲ್ ಕೂಡ ಕನೆಕ್ಟ್ ಮಾಡ್ಬೇಡಿ.
  • ಯಾರಿಗೂ ಓಟಿಪಿ ಹೇಳಬೇಡಿ.
  • ಸ್ಪ್ಯಾಮ್ ಕಾಲ್ ಪತ್ತೆಹಚ್ಚುವ ವ್ಯವಸ್ಥೆ ಆನ್ ಮಾಡಿ.
  • ಮೋಸದ ಕಾಲ್ ಬಂದ್ರೆ ಬ್ಯಾಂಕ್ ಮತ್ತೆ ಸೈಬರ್ ಪೊಲೀಸ್ ಗೆ ಕಂಪ್ಲೇಂಟ್ ಕೊಡಿ.
  • ಎನ್‌ಪಿಸಿಐ ರೂಲ್ಸ್ ಫಾಲೋ ಮಾಡಿ.
  • ಬ್ಯಾಂಕ್ ಡೀಟೇಲ್ಸ್ ನ ಯಾರಿಗೊ ಕೊಡಬೇಡಿ.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read