ರೈತರಿಗೆ ಗುಡ್ ನ್ಯೂಸ್: ರಾಷ್ಟ್ರೀಯ ಮಟ್ಟದ ಬಹು ರಾಜ್ಯ ಸಹಕಾರಿ ರಫ್ತು ಸೊಸೈಟಿ ಸ್ಥಾಪನೆಗೆ ಸಂಪುಟ ಒಪ್ಪಿಗೆ

ನವದೆಹಲಿ: ರಾಷ್ಟ್ರೀಯ ಮಟ್ಟದ ಬಹು-ರಾಜ್ಯ ಸಹಕಾರಿ ರಫ್ತು ಸೊಸೈಟಿ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.

ನವದೆಹಲಿಯಲ್ಲಿ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಭೂಪೇಂದರ್ ಯಾದವ್, ಬಹು-ರಾಜ್ಯ ಸಹಕಾರ ರಫ್ತು ಸೊಸೈಟಿ ಹೆಚ್ಚುವರಿ ಸರಕು ಮತ್ತು ಸೇವೆಗಳ ರಫ್ತಿಗೆ ಒಂದು ಛತ್ರಿ(umbrella)  ಸಂಸ್ಥೆಯಾಗಿ ಕೆಲಸ ಮಾಡುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಸಹಕಾರಿ ಸಂಸ್ಥೆಗಳ ರಫ್ತು ಸಾಮರ್ಥ್ಯ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಸಾವಯವ ಉತ್ಪನ್ನಗಳ ಸಂಗ್ರಹಣೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಗೆ ಇದರಿಂದ ಅನುಕೂಲವಾಗಲಿದೆ. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಸಾವಯವ ಉತ್ಪನ್ನಗಳ ಬೇಡಿಕೆ ಮತ್ತು ಬಳಕೆಗೆ ಉತ್ತೇಜನ ಸಿಗಲಿದೆ. ಈ ಕ್ರಮದ ಮೂಲಕ ಸಹಕಾರಿ ಸಂಘಗಳು ಮತ್ತು ರೈತ ಸದಸ್ಯರಿಗೆ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಲಿದೆ ಎಂದು ಹೇಳಿದರು.

ಇಳುವರಿ ಅಂತರ ಕಡಿಮೆ ಮಾಡಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡಲು ರಾಷ್ಟ್ರೀಯ ಮಟ್ಟದ ಬಹು-ರಾಜ್ಯ ಸಹಕಾರಿ ಬೀಜ ಸೊಸೈಟಿಯನ್ನು ಸ್ಥಾಪಿಸಲಿದ್ದು, ಮೂರು ರಾಷ್ಟ್ರೀಯ ಸಹಕಾರಿ ಸಂಸ್ಥೆಗಳನ್ನು ಬಹು-ರಾಜ್ಯ ಸಹಕಾರ ಸಂಘಗಳ ಕಾಯಿದೆ 2002 ರ ಅಡಿಯಲ್ಲಿ ಸ್ಥಾಪಿಸಲಾಗುವುದು ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read