ವಿಮಾನಕ್ಕಿಂತಲೂ ಹೆಚ್ಚಿನ ಸೌಲಭ್ಯ ಹೊಂದಿದೆ ಈ ಕ್ಯಾಬ್; ಉಬರ್ ಚಾಲಕನ ಕಾರ್ಯಕ್ಕೆ ನೆಟ್ಟಿಗರು ಫಿದಾ

ದೆಹಲಿಯ ಉಬರ್ ಚಾಲಕರೊಬ್ಬರು ತಮ್ಮ ಕ್ಯಾಬ್ ಅನ್ನು ಐಷಾರಾಮಿ ಲೌಂಜ್‌ನಂತೆ ಪರಿವರ್ತಿಸಿ ಗ್ರಾಹಕರಿಗೆ ವಿಮಾನದಲ್ಲಿಯೂ ಸಿಗದ ಸೌಲಭ್ಯಗಳನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಕುರಿತ ರೆಡ್ಡಿಟ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವರದಿಯ ಪ್ರಕಾರ, ಮಾರುತಿ ಸೆಲೆರಿಯೊ ಕ್ಯಾಬ್‌ನಲ್ಲಿ ಉಚಿತ ವೈಫೈ, ತಿಂಡಿಗಳು, ಕ್ಯಾಂಡಿಗಳು, ಬಾಟಲಿ ನೀರು, ಛತ್ರಿ, ಸ್ಯಾನಿಟೈಜರ್‌ಗಳು ಮತ್ತು ಔಷಧಿಗಳಂತಹ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ರೆಡ್ಡಿಟ್ ಪೋಸ್ಟ್‌ನಲ್ಲಿ “ವಿಮಾನಕ್ಕಿಂತಲೂ ಉತ್ತಮ ಕ್ಯಾಬ್ ಸೌಲಭ್ಯ” ಎಂದು ಶೀರ್ಷಿಕೆ ನೀಡಲಾಗಿದೆ.

ಈ ಪೋಸ್ಟ್‌ನಲ್ಲಿ ಅನೇಕರು ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು “ನಾನು ಅವರ ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದೇನೆ. ಅವರ ಹೆಸರು ಅಬ್ದುಲ್ ಖಾದಿರ್ ಮತ್ತು ಅವರು ಅದ್ಭುತ ವ್ಯಕ್ತಿ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಎಲ್ಲವೂ ಉಚಿತವಾಗಿತ್ತು. ನಾನು ಕೆಲವು ಕ್ಯಾಂಡಿಗಳನ್ನು ತೆಗೆದುಕೊಂಡೆ” ಎಂದು ಬರೆದಿದ್ದಾರೆ. ಈ ಘಟನೆಯು ಗ್ರಾಹಕರ ಸೇವೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read