ರಾಜ್ಯ ಸರ್ಕಾರದಿಂದ ತೆಲಂಗಾಣಕ್ಕೆ 5 ಕೋಟಿ ಹಣ ಸಂದಾಯ: ಸಿಬಿಐ ತನಿಖೆಗೆ ಎಂಎಲ್ ಸಿ ಸಿ.ಟಿ. ರವಿ ಆಗ್ರಹ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ತೆಲಂಗಾಣಕ್ಕೆ 5 ಕೋಟಿ ಹಣ ನೀಡಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಸರ್ಕಾರ ತೆಲಂಗಾಣಕ್ಕೆ 5 ಕೋಟಿ ಹಣ ಕೊಟ್ಟಿದೆ. ಲೋಕಸಭಾ ಚುನಾವಣೆ ವೇಳೆ ಕಲಬುರ್ಗಿ, ಬಳ್ಳಾರಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಹಣ ಹೋಗಿದೆ. ಕಲಬುರ್ಗಿಯಿಂದ ಖರ್ಗೆ ಅಳಿಯ ರಾಧಾಕೃಷ್ಣ ಸ್ಪರ್ಧಿಸಿದ್ದರು. ಒಂದುವೇಳೆ ಸಿಬಿಐ ತನಿಖೆ ನಡೆದರೆ ಎಲ್ಲವೂ ಹೊರಬರಲಿದೆ ಎಂದು ಹೇಳಿದರು.

ವಾಲ್ಮೀಕಿ ನಿಗಮದ ಹಗರಣದಲ್ಲಿ ಈವರೆಗೆ 11 ಜನರ ಬಂಧನವಾಗಿದೆ. ಉಳಿದವರನ್ನು ಯಾಕೆ ಬಂಧಿಸಿಲ್ಲ? ಹಣವನ್ನು ಜಪ್ತಿ ಮಾಡಿಲ್ಲ ಯಾಕೆ? ಎಲ್ಲದರ ಬಗ್ಗೆಯೂ ಸಂಪೂರ್ಣ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read