ಬೆಂಗಳೂರು: ಸಿಎಂ ಸಿದ್ದರಾಮಯ್ಯ 28 ಕೊಲೆಗಳನ್ನು ಮಡಿಸಿದ್ದಾರೆ ಅಂತ ಮಹೇಶ್ ತಿಮರೋಡಿ ಆರೋಪ ಮಾಡಿದ್ದಾನೆ. ಸಿಎಂ ಸಿದ್ದರಾಮಯ್ಯ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಎಂದರೆ ನಾನು ನಂಬಲ್ಲ ಎಂದು ಬಿಜೆಪಿ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿ.ಟಿ.ರವಿ, ಧರ್ಮಸ್ಥಳದ ಬಗ್ಗೆ ಆರೋಪ ಮಾಡಿದವರ ವಿರುದ್ಧ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಈ ಪ್ರಕರಣದಲ್ಲಿ ಸರ್ಕಾರವೂ ಶಾಮೀಲಾಗಿದೆ ಅಂತ ಅನವು ಅಸಮಾಧಾನ ಪಡಬೇಕಾಗುತ್ತದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದ್ದು, ಅಲ್ಲಿಗೆ ನಾವು ಹೋಗಿ ಹೋರಾಟ ಮಾಡದೇ ಇನ್ನೇನು ಮತಾಂತರಕ್ಕೆ ಬೆಂಬಲ ನೀಡುವವರು ಹೋಗಿ ಹೋರಾಟ ಮಾಡುತ್ತಾರಾ? ಎಂದು ಪ್ರಶ್ನಿಸಿದರು.
ಅನಾಮಿಕ ತೋರಿದ ಎಲ್ಲಾ ಜಾಗಗಳಲ್ಲಿ ಶೋಧ ನಡೆಸಿಯೂ ಏನೂ ಸಿಕ್ಕಿಲ್ಲ. ಆತನ ಜೊತೆ ಸೇರಿಕೊಂಡು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಯೂಟ್ಯೂಬರ್ಸ್, ಸೋಷಿಯಲ್ ಮೀಡಿಯಾದವರೂ ಸೇರಿಕೊಂಡಿದ್ದಾರೆ. ಉಪಮುಖ್ಯಮಂತ್ರಿಗಳೇ ಷಡ್ಯಂತ್ರ ನಡೆದಿದೆ ಎಂದಿದ್ದಾರೆ. ನಮಗೂ ಅದೇ ಅನುಮಾನವಿದೆ. ಅನಾಮಿಕನನ್ನು ಮಂಪರು ಪರೀಕ್ಷೆ ನಡೆಸಲಿ ಎಂದು ಆಗ್ರಹಿಸಿದರು.