ಚಿಕ್ಕಮಗಳೂರು: ಮುಸ್ಲಿಂರು ಎಲ್ಲೂ ಈಶ್ವರ ಅಲ್ಲಾ ತೇರೇ ನಾಮ್ ಎಂದು ಹೇಳುತ್ತಿಲ್ಲ. ಹೇಳಿದ್ದನ್ನು ನಾನಂತೂ ಕೇಳಿಲ್ಲ. ಅವರಿಗೆ ಮದರಸಾಗಳಲ್ಲಿ ಹೇಳಿಕೊಟ್ಟಿದ್ದರೆ ಭಯೋತ್ಪಾದಕರೇ ಇರುತ್ತಿರಲಿಲ್ಲ ಎಂದು ಎಂಎಲ್ ಸಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನ ದತ್ತಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ರಾಮ್ ರಹೀಮ್ ಒಂದೇ ಎಂದು ಅವರಿಗೂ ಹೇಳಿಕೊಟ್ಟಿದ್ದರೆ ಜಗಳಗಳು ಆಗುತ್ತಿರಲಿಲ್ಲ. ಹಿಂದೂಗಳು ರಾಮ್ ರಹೀಮ್ ಒಂದೇ ಎಂದು ಹೇಳುತ್ತೇವೆ. ಅದರೆ ಮುಸ್ಲಿಂರು ಹೇಳುತ್ತಿಲ್ಲ ಎಂದರು.
ನಾವು ಅಲ್ಲಾ ದೇವರು ಎನ್ನಲು ತೊಂದರೆ ಇಲ್ಲ. ನಮ್ಮ ಪರಂಪರೆ ಅದಕ್ಕೆ ಅವಕಾಶ ಕೊಡುತ್ತೆ. ಸಂಕುಚಿತ ಮನೊಭಾವದವು ಬದಲಾಗಬೇಕು. ಇಸ್ಲಾಂ ಹೆಸರಲ್ಲಿ ಅನ್ಯ ಧಾರ್ಮಿಕ ಕ್ಷೇತ್ರ ಕಬಳಿಸುವುದು ಅನಾಗರಿಕತೆ. ಅಧರ್ಮ. ನಾಶ ಮಾಡುವುದು ಧರ್ಮವಾಗಲು ಸಾಧ್ಯವಿಲ್ಲ ಎಂದರು.
ಸನಾತನ ಧರ್ಮ ಭಾರತೀಯ ಸ್ತ್ರೀಯರನ್ನು ಗೌರವಿಸುವ ಸಂಸ್ಕೃತಿ. ಆದರೆ ಪರಸ್ತ್ರೀ ಮೇಲೆ ಅತ್ಯಚಹಾರ ಮಾಡು ಎನ್ನುವುದು ಧರ್ಮವಾಗಲು ಸಾಧ್ಯವಿಲ್ಲ. ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್ದಾರೆ ಇದನ್ನು ಪೈಶಾಚಿಕ ಮತ ಎನ್ನಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು. .
