ಚಿಕ್ಕಮಗಳೂರು: ದುಡ್ದು ಹೊಡೆಯೋಕೆ ಜಾತಿಗಣತಿಯಂತಹ ಸ್ಕೀಮ್ ಹುಡುಕುತ್ತಿದ್ದೀರಾ? ಎಂದು ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಮನೆ ಮನೆಗೆ ಹೋಗಿ ಸಮೀಕ್ಷೆ ಎಂದು ಹೇಳಿದರು. ಈಗ ಕಾಂತರಾಜು ವರದಿ ತಿಪ್ಪೆಗೆ ಹಾಕಿದ್ದೀರಾ? ಯಾರ ಮನೆ ದುಡ್ದು? ಇಲ್ಲಾ ನಿಮ್ಮ ಫಾದರ್ ಮನೆಯದ್ದಾ? ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವೇ ಜಾತಿ ಹಾಗೂ ಜನಗಣತಿ ಎರಡನ್ನೂ ಮಾಡುತ್ತಿದೆ. ಹೀಗಿರುವಾಗ ನಮ್ಮದು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅಂತಾ ಹೆಸರಿಡುವುದು ಯಾವ ಲಾಜಿಕ್? ನಿಮಗೆ ಈರೀತಿ ಮಾಡಲು ಅಧಿಕಾರ ಕೊಟ್ಟಿದ್ದು ಯಾರು? ಸಂಪುಟದಲ್ಲಿಯೇ ಸಹಮತವಿಲ್ಲದ ಸಮೀಕ್ಷೆಯನ್ನು ಯಾಕೆ ಮಾಡುತ್ತಿದ್ದೀರಿ? ಜಾತಿ-ಮತಗಳ ನಡುವೆ ಭಿನ್ನತೆ ತಂದು ಹಿಂದೂ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದೀರಿ ಎಂದು ಗುಡುಗಿದ್ದಾರೆ.