ಚಿಕ್ಕಮಗಳೂರು: ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ವಿಚಾರವಾಗಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಕೇಸ್ ನನಗೆ ಹೊಸದಲ್ಲ, ಕೇಸ್ ಗಳಿಗೆ ಹೆದರುವವನೂ ನಾನಲ್ಲ. ನೀವು ಕಲ್ಲು ಹೊಡೆದು, ತೊಡೆ ತಟ್ಟಿ ಪೆಟ್ರೋಲ್ ಬಾಂಬ್ ಹಾಇದರೆ ಸಹಿಸುವ ಕಾಲ ಮುಗಿದಿದೆ ಎಂದಿದ್ದೆ. ಕ್ರಿಯೆಗೆ ತಕ್ಕ ಪ್ರತಿಕ್ರೊಯೆ ಎಂದು ಹೇಳಿದ್ದೇನೆ. ಪ್ರೀತಿಗೆ ಪ್ರೀತಿ, ಕಲ್ಲಿಗೆ ಕಲ್ಲು ಎಂದಿದ್ದೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದಿದ್ದಾರೆ.
ಶಿವನ ನೆಲದಲ್ಲಿ ಅಲ್ಲಾ ಒಬ್ಬಬೇ ಅಂತ ಅಂದ್ರೆ ಉಳಿದ ದೇವರ ಅಸ್ತಿತ್ವ ಏನು? ನನ್ನ ರಕ್ತ ಪ್ಯೂರ್ ಹಿಂದುತ್ವ. ಬೆರಕೆ ಅಲ್ಲ ಎಂದು ಕಿಡಿಕಾರಿದರು.
You Might Also Like
TAGGED:ಸಿ.ಟಿ.ರವಿ