BIG NEWS: ಮೂರು ಕ್ಷೇತ್ರಗಳ ಉಪಚುನಾವಣೆ: ಈವರೆಗಿನ ಶೇಕಡಾವಾರು ಮತದಾನ

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿಯೂ ಬೆಳಿಗ್ಗೆಯಿಂದ ಬಿರುಸಿನಿಂದ ಮತದಾನ ಸಾಗುತ್ತಿದೆ.

ವಯೋವೃದ್ಧರು ಕುಡ ವ್ಹೀಲ್ ಚೇರ್ ನಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೂರು ಕ್ಷೇತ್ರಗಳಲ್ಲಿಯೂ ಬೆಳಿಗ್ಗೆ 9ಗಂಟೆಯವರೆಗೂ ಉತ್ತಮ ರೀತಿಯಲ್ಲಿ ಮತದಾನವಾಗಿದೆ.

ಮೂರು ಕ್ಷೇತ್ರಗಳಲ್ಲಿ ಬೆಳಿಗ್ಗೆ 9ಗಂಟೆಯವರೆಗಿನ ಶೇಕಡಾವಾರು ಮತದಾನದ ಮಾಹಿತಿ

ಶಿಗ್ಗಾಂವಿ: ಬೆಳಿಗ್ಗೆ 9 ಗಂಟೆಯವರೆಗೆ ಶೇ.10.08ರಷ್ಟು ಮತದಾನ
ಸಂಡೂರು: ಬೆಳಿಗ್ಗೆ 9 ಗಂಟೆಯವರೆಗೆ ಶೇ.9.07ರಷ್ಟು ಮತದಾನ
ಚೆನ್ನಪಟ್ಟಣ: ಬೆಳಿಗ್ಗೆ 9ಗಂಟೆವರೆಗೆ ಶೇ.10.34ರಷ್ಟು ಮತದಾನ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read