ನೀರು ಪೋಲು ಮಾಡಿದವರಿಗೆ ‘ಬಿಗ್ ಶಾಕ್: ದಂಡಾಸ್ತ್ರ ಪ್ರಯೋಗ, 7 ದಿನದಲ್ಲಿ 112 ಮಂದಿಯಿಂದ 5.60 ಲಕ್ಷ ದಂಡ ವಸೂಲಿ

ಬೆಂಗಳೂರು: ಬೇಸಿಗೆ ಆರಂಭದಲ್ಲಿಯೇ ಬೆಂಗಳೂರು ಜನತೆಗೆ ಜಲ ಮಂಡಳಿ ಶಾಕ್ ನೀಡಿದೆ. ಕುಡಿಯುವ ನೀರು ವ್ಯರ್ಥ ಮಾಡಿದವರ ಮೇಲೆ ದಂಡಾಸ್ತ್ರ ಪ್ರಯೋಗಿಸಿದೆ.

ಕುಡಿಯುವ ನೀರು ವ್ಯರ್ಥ ಮಾಡಿದ ಸಂಬಂಧ 112 ಕೇಸುಗಳನ್ನು ದಾಖಲಿಸಲಾಗಿದ್ದು, 5.60 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಫೆಬ್ರವರಿ 17ರಂದು ಬೆಂಗಳೂರಿನಲ್ಲಿ ಅನಗತ್ಯವಾಗಿ ನೀರು ಪೋಲು ಮಾಡಬಾರದು ನಿಯಮ ಉಲ್ಲಂಘಿಸಿ ಕುಡಿಯುವ ನೀರು ಪೋಲು ಮಾಡಿದರೆ 5000 ರೂ. ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಜಲ ಮಂಡಳಿ ಎಚ್ಚರಿಕೆ ನೀಡಿತ್ತು.

ಹೀಗಿದ್ದರೂ ನೀರು ಪೋಲು ಮಾಡಿದ 112 ಮಂದಿಗೆ ದಂಡ ವಿಧಿಸಲಾಗಿದೆ. ದಕ್ಷಿಣ ವಲಯದಲ್ಲಿ 33 ಪ್ರಕರಣ ದಾಖಲಾಗಿದ್ದು, ಉತ್ತರದಲ್ಲಿ 23, ಪಶ್ಚಿಮ ಹಾಗೂ ಪೂರ್ವ ವಲಯದಲ್ಲಿ ತಲಾ 28 ಪ್ರಕರಣ ದಾಖಲಾಗಿವೆ. ಕುಡಿಯಲು  ಹೊರತು ಇನ್ನಿತರ ಬಳಕೆಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read