93ನೇ ಜನ್ಮದಿನದಂದು ನಾಲ್ಕನೇ ಮದುವೆ ಮಾಡಿಕೊಂಡ ಗಗನಯಾತ್ರಿ….!

1969ರ ಅಪೋಲೋ ಗಗನನೌಕೆಯಲ್ಲಿ ಚಂದ್ರನಂಗಳಕ್ಕೆ ತೆರಳಿ ನೀಲ್ ಆರ್ಮ್ ಸ್ಟ್ರಾಂಗ್ ಕಾಲಿಟ್ಟ 19 ನಿಮಿಷದ ಬಳಿಕ ಎರಡನೆಯವರಾಗಿ ಇಳಿದ ಹೆಗ್ಗಳಿಕೆ ಹೊಂದಿರುವ ಬಜ್ ಆಲ್ಡ್ರಿನ್ ತಮ್ಮ 93ನೇ ಜನ್ಮದಿನದಂದು ನಾಲ್ಕನೇ ಬಾರಿಗೆ ವಿವಾಹವಾಗಿದ್ದಾರೆ.

ಬಹುಕಾಲದ ಗೆಳತಿ ಡಾ. ಅಂಕಾ ಫೌರ್ ಅವರೊಂದಿಗೆ ಕ್ಯಾಲಿಫೋರ್ನಿಯದ ಲಾಸ್ ಏಂಜಲೀಸ್ ನಲ್ಲಿ ನಡೆದ ಸಮಾರಂಭದಲ್ಲಿ ಬಜ್ ಆಲ್ಡ್ರಿನ್ ವಿವಾಹವಾಗಿದ್ದು, ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರು ಹಾಜರಿದ್ದರು.

ಶನಿವಾರದಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಮ್ಮ ವಿವಾಹದ ಕುರಿತು ಬಜ್ ಆಲ್ಡ್ರಿನ್ ಪೋಸ್ಟ್ ಹಾಕಿದ್ದು, ಇದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಈ ಪೋಸ್ಟನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ಈ ಮೊದಲು ಬಜ್ ಆಲ್ಡ್ರಿನ್ ಮೂರು ಮದುವೆಯಾಗಿದ್ದು, ಮೂವರು ಪತ್ನಿಯರಿಗೂ ವಿಚ್ಛೇದನ ನೀಡಿದ್ದಾರೆ. ಚಂದ್ರನಂಗಳಕ್ಕೆ ಕಾಲಿಟ್ಟ ಮೂವರು ವ್ಯಕ್ತಿಗಳ ಪೈಕಿ ಬಜ್ ಆಲ್ಡ್ರಿನ್ ಮಾತ್ರ ಈಗ ಬದುಕಿದ್ದಾರೆ.

Buzz Aldrin and new wife Dr. Anca Faur

Astronaut Edwin E. Aldrin Jr., lunar module pilot, is pictured in the Apollo 11 Lunar Module, July 20, 1969

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read