ನವದೆಹಲಿ: ಜಡ್ಜ್ ಆಗಲು ಮೂರು ವರ್ಷ ವಕೀಲಿಕೆ ಪೂರ್ವಾನ್ವಯ ಇಲ್ಲ. ಮೇ 20ರ ನಂತರ ನೇಮಕಾತಿಗೆ ಮಾತ್ರ ಅನ್ವಯವಾಗಲಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಜಡ್ಜ್ ಆಗಲು ಪ್ರವೇಶ ಮಟ್ಟದ ನ್ಯಾಯಾಂಗ ಸೇವೆಗಳ ಪರೀಕ್ಷೆ ಬರೆಯುವವರು ಕಡ್ಡಾಯವಾಗಿ ಮೂರು ವರ್ಷ ವಕೀಲಿಕೆ ಮಾಡಿರಬೇಕು ಎಂಬ ನಿಯಮ ಆದೇಶ ಹೊರಡಿಸಿದ ಮೇ 20ರ ನಂತರ ನೇಮಕವಾಗುವವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.
ಮೇ 14ರಂದು ನಡೆದ ನೇಮಕಾತಿಯ ವೇಳೆ ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸೇವಾ ಆಯೋಗ 3 ವರ್ಷಗಳ ಅಭ್ಯಾಸ ಕಡ್ಡಾಯಗೊಳಿಸಿರಲಿಲ್ಲ. ಇದನ್ನು ಪ್ರಶ್ನಿಸಿ ನವೀದ್ ಬುಖ್ತಿಯಾ ಸೇರಿ ಐವರು ವಕೀಲರು ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ಪೀಠ ತಿರಸ್ಕರಿಸಿದೆ.