ಚಾಮರಾಜನಗರ: ಕರ್ತವ್ಯ ಲೋಪದ ಆರೋಪದ ಮೇಲೆ ಚಾಮರಾಜನಗರ ಪಟ್ಟಣ ಠಾಣೆಯ ಪಿಎಸ್ಐ(ಪ್ರಭಾರ) ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಪಿಎಸ್ಐ ಅಯ್ಯನಗೌಡ, ಹೆಡ್ ಕಾನ್ಸ್ಟೇಬಲ್ ಬಸವಣ್ಣ ಹಾಗೂ ಕಾನ್ಸ್ಟೇಬಲ್ ಗಳಾದ ಮೋಹನ್ ಮತ್ತು ಮಹೇಶ್ ಅಮಾನತುಗೊಂಡವರು. ಜುಲೈ 26ರಂದು ಚಾಮರಾಜನಗರದ ಸತ್ಯಮಂಗಲ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದ ತಮಿಳುನಾಡಿನ ಸಚ್ಚಿದಾನಂದ ಎಂಬುವರನ್ನು ಹೆದರಿಸಿ 3 ಲಕ್ಷ ರೂಪಾಯಿ ನಗದು ಮತ್ತು ಖಾತೆಯಲ್ಲಿದ್ದ 70 ಸಾವಿರ ರೂ. ಸೇರಿ ಒಟ್ಟು 3.70 ಲಕ್ಷ ರೂ. ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತು ಕ್ರಮ ಕೈಗೊಳ್ಳಲಾಗಿದೆ.
ಪಿಎಸ್ಐ ಸೇರಿ ನಾಲ್ವರು ಸಿಬ್ಬಂದಿ ಬೆದರಿಸಿ ಸುಲಿಗೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.