ಕೋಲಾರ: ತರಕಾರಿ ಮಂಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಹಣ ದೋಚಿದ ಘಟನೆ ಕೋಲಾರ ಜಿಲ್ಲೆ, ಶ್ರೀನಿವಾಸಪುರದ ಕಾಲೋನಿ ಗೇಟ್ ಬಳಿ ನಡೆದಿದೆ.
ಮಾರ್ಕಂಡಪುರ ಗ್ರಾಮದ ಲಿಂಗರಾಜು ಹಲ್ಲೆಗೊಳಗಾದವರು. ಕಲ್ಲೂರು ಗ್ರಾಮದ ಎಸ್.ಎಲ್.ಎಂ. ವೆಜಿಟೇಬಲ್ ಮಾರ್ಕೆಟ್ ನಡೆಸುತ್ತಿರುವ ಲಿಂಗರಾಜು ರೈತರಿಗೆ ಹಣ ನೀಡಲು ಮಾರ್ಕಂಡಪುರದಿಂದ ಕೋಲಾರಕ್ಕೆ ತೆರಳುತ್ತಿದ್ದರು.
ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದ ವೇಳೆ ಆರೋಪಿಗಳು ಕಾರಿನ ಗಾಜು ಒಡೆದು 15 ಲಕ್ಷ ರೂ. ದೋಚಲು ಮುಂದಾಗಿದ್ದರೆ. ಕಾರಿನ ಗ್ಲಾಸ್ ಒಡೆದ ಶಬ್ದ ಕೇಳಿ ಓಡಿ ಬಂದ ಲಿಂಗರಾಜು ಅವರಿಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ. ಕಾರ್ ನಲ್ಲಿದ್ದ 15 ಲಕ್ಷ ರೂ. ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಗಾಯಗೊಂಡ ಲಿಂಗರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.