ಬೆಂಗಳೂರು : ಪ್ರಯಾಣಿಕರ ಸೋಗಿನಲ್ಲಿ ಬಸ್ಸಿನಲ್ಲಿ ಕಳ್ಳತನ ಮಾಡುತ್ತಿದ್ದ ‘ಬುರ್ಕಾ ಗ್ಯಾಂಗ್’ ಒಂದು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಪ್ರಯಾಣಿಕರ ಸೋಗಿನಲ್ಲಿ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಚಿನ್ನಾಭರಣ-ಹಣ ಕಳ್ಳತನ ಮಾಡುತ್ತಿದ್ದ ಬುರ್ಖಾ ಗ್ಯಾಂಗ್ ಒಂದು ಅರೆಸ್ಟ್ ಆಗಿದೆ.
ಕಲಬುರಗಿ ಮೂಲದ ಅನು ಹಾಗೂ ಪದ್ಮಾ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತದಿಂದ 16 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ. ಕೆಎಸ್ ಆರ್ ಟಿಸಿ ಬಸ್ ನಲ್ಲಿ ಚಿನ್ನಾಭರಣ ಕಳ್ಳತನವಾಗಿದೆ ಎಂದು ಸಂತ್ರ ಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹೆಚ್ಚು ರಶ್ ಇರುವ ಬಸ್ ಹತ್ತುತ್ತಿದ್ದ ಆರೋಪಿಗಳು ಜನಸಂದಣಿಯಲ್ಲಿ ಚಿನ್ನ ಎಗರಿಸಿ ಎಸ್ಕೇಪ್ ಆಗುತ್ತಿದ್ದರು.