ವಿಜಯನಗರ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ಹೆಡ್ ಕಾನ್ಸ್ ಟೇಬಲ್ ದರ್ಪ ಮೆರೆದಿರುವ ಘಟನೆ ವಿಜಯನಗರ ಜಿಲ್ಲೆಯ ಮಲ್ಲನಾಯಕನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಬೈಕ್ ಗೆ ಬಸ್ ಟಚ್ ಆಗಿದ್ದಕ್ಕೆ ಹೆಡ್ ಕಾನ್ಸ್ ಟೇಬಲ್ ಮಂಜುನಾಥ್, ಬಸ್ ಚಾಲಕನ್ನು ಹಿಡಿದು ಚಪ್ಪಲಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.
ಹರಿಹರ ಘಟಕದ ಬಸ್ ಚಾಲಕ ರಾಮಲಿಂಗಪ್ಪ ಮೇಲೆ ಪೊಲೀಸಪ್ಪ ದರ್ಪ ಮೆರೆದು ಹಲ್ಲೆ ಮಾಡಿದ್ದಾರೆ. ತಪ್ಪಾಯಿತು ಎಂದು ಕೇಳಿಕೊಂಡರೂ ಬಿಡದೇ ಥಳಿಸಿದ್ದಾರೆ ಎಂದು ಹೆಡ್ ಕಾನ್ಸ್ ಟೇಬಲ್ ವಿರುದ್ಧ ಕೂಡ್ಲಗಿ ಠಾಣೆಯಲ್ಲಿ ದೂರು ದಾಖಲಾಗಿದೆ.