ಮದುವೆ ದಿಬ್ಬಣದ ಬಸ್ ಪಲ್ಟಿಯಾಗಿ 10 ಜನ ಸಾವು

ಕ್ಯಾನ್‌ ಬೆರಾ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ವೈನ್ ಪ್ರದೇಶದಲ್ಲಿ ಮದುವೆಗೆ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಉರುಳಿ ಬಿದ್ದು, 10 ಜನರು ಸಾವನ್ನಪ್ಪಿದ್ದಾರೆ. ಮಂಜು ಕವಿದ ರಾತ್ರಿಯಲ್ಲಿ ನಡೆದ ಅಪಘಾತದಲ್ಲಿ 25 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

58 ವರ್ಷದ ಚಾಲಕನನ್ನು ಬಂಧಿಸಿ ಸೆಸ್ನಾಕ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಸಹಾಯಕ ಕಮಿಷನರ್ ಟ್ರೇಸಿ ಚಾಪ್ಮನ್ ತಿಳಿಸಿದ್ದಾರೆ.

ರಾತ್ರಿ 11:30 ರ ನಂತರ ಅಪಘಾತ ಸಂಭವಿಸಿದೆ. ಸಿಡ್ನಿಯ ಉತ್ತರದಲ್ಲಿರುವ ನ್ಯೂ ಸೌತ್ ವೇಲ್ಸ್ ರಾಜ್ಯದ ಹಂಟರ್ ವ್ಯಾಲಿ ಪ್ರದೇಶದ ಗ್ರೆಟಾ ಪಟ್ಟಣದ ವೈನ್ ಕಂಟ್ರಿ ಡ್ರೈವ್‌ನಲ್ಲಿನ ವೃತ್ತದಲ್ಲಿ ಅಪಘಾತ ಸಂಭವಿಸಿದೆ.

ವಾಂಡಿನ್ ಎಸ್ಟೇಟ್ ವೈನರಿಯಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ್ದವರು ಸಿಂಗಲ್ಟನ್ ಪಟ್ಟಣದಲ್ಲಿ ತಮ್ಮ ಮನೆಗಳಿಗೆ ಹೋಗುತ್ತಿದ್ದರು. ಗಾಯಗೊಂಡ 25 ಜನರನ್ನು ಹೆಲಿಕಾಪ್ಟರ್ ಮತ್ತು ರಸ್ತೆ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. 18 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಚಾಪ್ಮನ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read