ಪಾದಗಳಲ್ಲಿಉರಿಯೇ..? ಚಿಂತೆಬಿಡಿ..ಇಲ್ಲಿದೆ 5 ಪರಿಣಾಮಕಾರಿ ಮನೆಮದ್ದು!

ಪಾದಗಳ ಅಡಿಭಾಗದಲ್ಲಿ ಉರಿ ಕಾಣಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ದೀರ್ಘಕಾಲ ನಿಂತಿರುವ, ಸರಿಯಾದ ಪಾದರಕ್ಷೆ ಧರಿಸದ ಅಥವಾ ನರಗಳಿಗೆ ಹಾನಿಯಾಗಿದ್ದರೆ ಇಂತಹ ಸಮಸ್ಯೆ ಎದುರಾಗಬಹುದು. ಮಧುಮೇಹ ಮತ್ತು ಅತಿಯಾದ ಮದ್ಯಪಾನ ಕೂಡ ಈ ಸಮಸ್ಯೆಗೆ ಕಾರಣವಾಗಬಹುದು. ಸಾಮಾನ್ಯವಾಗಿ ವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಉರಿ ಅಥವಾ ಜುಮ್ಮೆನಿಸುವಿಕೆ ಪಾದದ ಉಳಿದ ಭಾಗಗಳಿಗೂ, ಕಾಲ್ಬೆರಳುಗಳಿಗೂ ಹರಡಬಹುದು. ಈ ಸಮಸ್ಯೆಯಿಂದ ಹೊರಬರಲು ಕೆಲವು ಸರಳ ಮನೆಮದ್ದುಗಳು ಪರಿಣಾಮಕಾರಿ ಎಂಬುದನ್ನು ತಜ್ಞರು ಸೂಚಿಸಿದ್ದಾರೆ.

ಪಾದಗಳಲ್ಲಿನ ಉರಿಗೆ ಪರಿಣಾಮಕಾರಿ ಮನೆಮದ್ದುಗಳು:

  1. ಐಸ್ ನೀರಿನ ಚಿಕಿತ್ಸೆ: ಪಾದಗಳಲ್ಲಿನ ಉರಿ ಕಡಿಮೆ ಮಾಡಲು ಅತಿ ತಂಪಾದ ಐಸ್ ನೀರಿನಲ್ಲಿ ಕಾಲುಗಳನ್ನು ಅದ್ದಿ ಇಡುವುದು ಅತ್ಯಂತ ಪರಿಣಾಮಕಾರಿ. ಇದು ತಕ್ಷಣದ ಉಪಶಮನ ನೀಡುತ್ತದೆ. ಕಾಲುಗಳನ್ನು ಸಂಪೂರ್ಣವಾಗಿ ಮುಳುಗಿಸಿ, ಪ್ರತಿದಿನವೂ ಈ ವಿಧಾನವನ್ನು ಅನುಸರಿಸಬಹುದು.
  2. ಆಪಲ್ ಸೈಡರ್ ವಿನೆಗರ್: ಆರೋಗ್ಯ ಮತ್ತು ತ್ವಚೆಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿರುವ ಆಪಲ್ ಸೈಡರ್ ವಿನೆಗರ್ ಪಾದಗಳಲ್ಲಿನ ಉರಿ ನಿವಾರಣೆಗೂ ಸಹಾಯಕ. ಇದನ್ನು ಉಗುರು ಬೆಚ್ಚಗಿನ ನೀರಿಗೆ ಬೆರೆಸಿ, ನಿಮ್ಮ ಕಾಲುಗಳನ್ನು ಸ್ವಲ್ಪ ಸಮಯದವರೆಗೆ ಅದರಲ್ಲಿ ಮುಳುಗಿಸಿಡಿ. ಇದರಿಂದ ಉರಿ ಕಡಿಮೆಯಾಗುತ್ತದೆ.
  3. ಶುಂಠಿ ಎಣ್ಣೆ ಮಸಾಜ್: ಶುಂಠಿ ಎಣ್ಣೆಯು ನೋವು ನಿವಾರಕ ಗುಣಗಳನ್ನು ಹೊಂದಿದೆ. ಕಾಲ್ಬೆರಳುಗಳಲ್ಲಿ ಅಥವಾ ಪಾದಗಳ ಅಡಿಭಾಗದಲ್ಲಿ ಉರಿ ಇದ್ದರೆ, ಶುಂಠಿ ಎಣ್ಣೆಯಿಂದ ಮಸಾಜ್ ಮಾಡುವುದು ಪರಿಣಾಮಕಾರಿ. ಒಂದೆರಡು ಹನಿ ಶುಂಠಿ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿ.
  4. ಕಾಲುಗಳನ್ನು ಎತ್ತಿ ಇಡುವುದು: ಅತ್ಯಂತ ಸರಳವಾದ ಆದರೆ ಪರಿಣಾಮಕಾರಿ ವಿಧಾನವೆಂದರೆ ಮಲಗುವಾಗ ಕಾಲುಗಳ ಕೆಳಗೆ ದಿಂಬು ಇಡುವುದು. ಇದು ನಿಮ್ಮ ಕಾಲುಗಳನ್ನು ದೇಹಕ್ಕಿಂತ ಸ್ವಲ್ಪ ಎತ್ತರದಲ್ಲಿ ಇರಿಸುತ್ತದೆ. ಇದರಿಂದ ರಕ್ತ ಸಂಚಾರ ಸುಧಾರಿಸಿ, ಉರಿ ಕಡಿಮೆಯಾಗುತ್ತದೆ.
  5. ಕೋಲ್ಡ್ ಕಂಪ್ರೆಸ್: ಪಾದಗಳಲ್ಲಿನ ಉರಿ ಮತ್ತು ಜುಮ್ಮೆನಿಸುವಿಕೆ ಕಡಿಮೆ ಮಾಡಲು ಕೋಲ್ಡ್ ಕಂಪ್ರೆಸ್ ಕೂಡ ಉತ್ತಮ ವಿಧಾನವಾಗಿದೆ. ಒಂದು ಬಟ್ಟೆ ಅಥವಾ ಸಣ್ಣ ಟವೆಲ್‌ನಲ್ಲಿ ಐಸ್ ತುಂಡನ್ನು ಇಟ್ಟು, ಸ್ವಲ್ಪ ಸಮಯದವರೆಗೆ ಪಾದಗಳ ಅಡಿಭಾಗಕ್ಕೆ ಒತ್ತುವುದು ಪರಿಣಾಮಕಾರಿ.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read