ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಪೊಲೀಸರಿಂದಲೇ ಆಘಾತಕಾರಿ ಕೃತ್ಯವೊಂದು ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬೆಚ್ಚಿ ಬೀಳಿಸುವ ವಿಡಿಯೋ ಈಗ ವೈರಲ್ ಆಗಿದ್ದು, ಸಾರ್ವಜನಿಕರ ಸಮ್ಮುಖದಲ್ಲಿ ಹಾಡಹಗಲೇ ಪೊಲೀಸರು ನಡೆಸಿರುವ ಈ ಕೃತ್ಯ ಈಗ ಚರ್ಚೆಗೆ ಕಾರಣವಾಗಿದೆ.
ಯುವಕನೊಬ್ಬನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರೇ ರಿವಾಲ್ವರ್ ಒಂದನ್ನು ಮುಚ್ಚಿಟ್ಟುಕೊಂಡು ತಂದು ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇಟ್ಟಿದ್ದಾರೆ. ವಿಡಿಯೋದಲ್ಲಿ ಕಂಡುಬರುವಂತೆ ಬೈಕಿನಲ್ಲಿ ಬರುವ ಇಬ್ಬರು ಪೊಲೀಸರ ಪೈಕಿ ಒಬ್ಬಾತ ಬಟ್ಟೆಯಿಂದ ಮುಚ್ಚಿಟ್ಟುಕೊಂಡಿದ್ದ ರಿವಾಲ್ವರನ್ನು ಯುವಕ ನಿಲ್ಲಿಸಿದ್ದ ಕಾರಿನಲ್ಲಿ ಇಟ್ಟಿದ್ದಾನೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯಾವ ಕಾರಣಕ್ಕಾಗಿ ಪೊಲೀಸರು ಈ ಕಾರ್ಯ ಮಾಡಿದ್ದಾರೆ ಎಂದು ಪ್ರಶ್ನಿಸಲಾಗುತ್ತಿದೆ. ಈವರೆಗೆ ಸಿನಿಮಾಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ಇಂತಹ ಸನ್ನಿವೇಶ ಈಗ ಸಾರ್ವಜನಿಕರ ಸಮ್ಮುಖದಲ್ಲಿ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ವಿಡಿಯೋ ಈಗ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಸಹ ಬಂದಿದೆ ಎನ್ನಲಾಗಿದ್ದು, ತನಿಖೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
https://twitter.com/vikalysp/status/1820474509717274747?ref_src=twsrc%5Etfw%7Ctwcamp%5Etweetembed%7Ctwterm%5E1820474509717274747%7Ctwgr%5E96bf676c683472e8b8006a1