Budget Breaking : ಬಜೆಟ್’ನಲ್ಲಿ ಯಾವುದು ದುಬಾರಿ, ಯಾವುದು ಅಗ್ಗ..? ಇಲ್ಲಿದೆ ಸಂಪೂರ್ಣ ಪಟ್ಟಿ

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ಮಂಡಿಸಿದ್ದಾರೆ . 2024 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದ ಮೋದಿ 3.0 ಸರ್ಕಾರದ ಎರಡನೇ ಪೂರ್ಣ ಬಜೆಟ್ ಇದಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-2026ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಗ್ರಾಹಕರಿಗೆ ಅಗ್ಗದ ಮತ್ತು ದುಬಾರಿಯಾದ ವಸ್ತುಗಳು ಇಲ್ಲಿವೆ.

ಯಾವುದು ಅಗ್ಗ..?

ಎಲ್ಇಡಿ ಟಿವಿಗಳ ಮೇಲಿನ ಸುಂಕ ಇಳಿತ
ಕ್ಯಾನ್ಸರ್ ಔಷಧಗಳ ಮೆಲಿನ ಟ್ಯಾಕ್ಸ್ ಇಳಿಕೆ
ಮೊಬೈಲ್ ಮೇಲಿನ ತೆರಿಗೆ ಇಳಿಕೆ
ಸ್ವದೇಶಿ ಬಟ್ಟೆಗಳ ಮೇಲಿನ ಟ್ಯಾಕ್ಸ್ ಇಳಿಕೆ
ಚರ್ಮದ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ
ಎಲೆಕ್ಟ್ರಿಕ್ ವಾಹನಗಳ ಮೇಲಿನ ಟ್ಯಾಕ್ಸ್ ಇಳಿಕೆ

ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ 36 ಔಷಧಿಗಳನ್ನು ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗುವುದು.ಇನ್ನೂ ೩೭ ಔಷಧಿಗಳ ಮೇಲೆ ಮೂಲ ಕಸ್ಟಮ್ ಸುಂಕವನ್ನು ವಿನಾಯಿತಿ ನೀಡಲು ಸರ್ಕಾರ ಪ್ರಸ್ತಾಪಿಸಿದೆ.

ಕೋಬಾಲ್ಟ್ ಉತ್ಪನ್ನ, ಎಲ್ಇಡಿ, ಸತು, ಲಿಥಿಯಂ-ಐಯಾನ್ ಬ್ಯಾಟರಿ ಸ್ಕ್ರ್ಯಾಪ್ ಮತ್ತು 12 ನಿರ್ಣಾಯಕ ಖನಿಜಗಳನ್ನು ಮೂಲ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲು ಕೇಂದ್ರ ಪ್ರಸ್ತಾಪಿಸಿದೆ.
ಹಡಗುಗಳನ್ನು ತಯಾರಿಸಲು ಕಚ್ಚಾ ವಸ್ತುಗಳ ಮೇಲೆ ಮೂಲ ಕಸ್ಟಮ್ಸ್ ಸುಂಕವನ್ನು ಇನ್ನೂ 10 ವರ್ಷಗಳವರೆಗೆ ವಿನಾಯಿತಿ ನೀಡಲಾಗಿದೆ.

ಮೀನಿನ ಪಾಶ್ಚರಿ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.30ರಿಂದ ಶೇ.5ಕ್ಕೆ ಇಳಿಸಲಾಗುವುದು.ಕರಕುಶಲ ರಫ್ತನ್ನು ಮತ್ತಷ್ಟು ಉತ್ತೇಜಿಸುವ ಯೋಜನೆಯನ್ನು ಕೇಂದ್ರವು ಘೋಷಿಸಿತು.ಎತರ್ನೆಟ್ ಸ್ವಿಚ್ ಮೇಲಿನ ತೆರಿಗೆ ಇಳಿಕೆ,  ಇವಿ ಬ್ಯಾಟರಿಗಳ ಮೇಲಿನ ತೆರಿಗೆ ಇಳಿಕೆ,  ದೋಣಿ, ಹಡಗು ತಯಾರಿಸಲು ಬಳಸುವ ಸಾಮಗ್ರಿಗಳ ಮೇಲಿನ ಕಸ್ಟಮ್ಸ್ ಮುಂದಿನ 10ವರ್ಷದ ವರೆಗೆ ವಿನಾಯತಿ,  ಝಿಂಕ್, ಲಿಥಿಯಮ್ ಬ್ಯಾಟರಿಯ ಸ್ಕ್ರ್ಯಾಪ್ ಮೇಲಿನ ಸುಂಕ ಇಳಿಕೆ,ಮೊಬೈಲ್ ಫೋನ್ ತಯಾರಿಕೆಗೆ ಬಳಸುವ 28 ಸರಕುಗಳ ಮೇಲಿನ ಸುಂಕ ಇಳಿಕೆ.

ದುಬಾರಿಯಾದ ವಸ್ತುಗಳು

ನಿರ್ದಿಷ್ಟ ಟೆಲಿಕಾಂ ಉಪಕರಣಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 10 ರಿಂದ 15 ಕ್ಕೆ ಹೆಚ್ಚಿಸಲಾಗಿದೆ.

ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ ಮೇಲೆ ತೆರಿಗೆ ಹೆಚ್ಚಳ

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read