ತನ್ನ ಟೀಸರ್ ಹಾಗೂ ಟ್ರೈಲರ್ ನಿಂದಲೇ ಎಲ್ಲರ ಗಮನ ಸೆಳೆದಿರುವ ‘ಬಿಟಿಎಸ್’ ಚಿತ್ರ ಇದೆ ನವೆಂಬರ್ 8ರಂದು ತೆರೆ ಮೇಲೆ ಬರಲು ಸಜ್ಜಾಗಿದೆ. ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್ ಶಂಕದ್, ಸೇರಿದಂತೆ ಅಪೂರ್ವ ಭಾರದ್ವಾಜ್, ಈ ಚಿತ್ರವನ್ನು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.
ಒಟ್ಟಾರೆ ಐದು ನಿರ್ದೇಶಕರು ಆಕ್ಷನ್ ಕಟ್ ಹೇಳಿದ್ದು, ಇದೊಂದು ಹೊಸ ದಾಖಲೆಯಾಗಿದೆ. ಇನ್ನುಳಿದಂತೆ ನಾಗೇಶ್ ಗೋಪಾಲ್, ಕಾರ್ತಿಕ್ ಬುಕ್ಕಾಂಬುದ್ಧಿ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
ಈ ಚಿತ್ರದಲ್ಲಿ ಜಹಾಂಗೀರ್ ಎಂಎಸ್, ವಿಜಯ್ ಕೃಷ್ಣ, ಆಹಾನ್, ಮೇದಿನಿ ಕೆಳಮನೆ, ವಿನಯ್ ಭಟ್, ಯುವರಾಜ್, ಕೌಶಿಕ್ ಗೌಡ, ಚಂದನ ಕಶ್ಯಪ್, ಮಹದೇವ ಪ್ರಸಾದ್, ಶ್ರೀ ಪ್ರಿಯಾ ತೆರೆ ಹಂಚಿಕೊಂಡಿದ್ದು, ನವನೀತ್ ಶಾಮ್, ಭಿನ್ನಷಡ್ಜ, ಮಯೂರೇಶ್ ಅಧಿಕಾರಿ, ಅಪರಜಿತ್ ಶ್ರೀ ಸಂಗೀತ ಸಂಯೋಜನೆ ನೀಡಿದ್ದಾರೆ.