BREAKING: ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧ ಹುತಾತ್ಮ: 7 ಸಿಬ್ಬಂದಿಗೆ ಗಾಯ

ಜಮ್ಮು ಜಿಲ್ಲೆಯ ಆರ್‌ಎಸ್‌ ಪುರ ಸೆಕ್ಟರ್‌ನಲ್ಲಿ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನವು ಗಡಿಯಾಚೆಯಿಂದ ಗುಂಡಿನ ದಾಳಿ ನಡೆಸಿದ ನಂತರ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಸಬ್-ಇನ್ಸ್‌ಪೆಕ್ಟರ್ ಮೊಹಮ್ಮದ್ ಇಮ್ತೆಯಾಜ್ ಸಾವನ್ನಪ್ಪಿದರು. ಇತರ 7 ಸಿಬ್ಬಂದಿ ಗಾಯಗೊಂಡಿದ್ದಾರೆ.

ಬಿಎಸ್‌ಎಫ್ ಗಡಿ ಹೊರ ಠಾಣೆಯನ್ನು ಮುನ್ನಡೆಸುತ್ತಿದ್ದಾಗ, ಇಮ್ತೆಯಾಜ್ ಗಂಭೀರ ಗಾಯಗಳಿಗೆ ಒಳಗಾದರು. ಮುಂಭಾಗದಿಂದ ತಮ್ಮ ಠಾಣೆಯನ್ನು ಮುನ್ನಡೆಸುತ್ತಿದ್ದ ಅವರು ಪಾಕ್ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ ಎಂದು ಬಿಎಸ್‌ಎಫ್ ತಿಳಿಸಿದೆ.

ಡಿಜಿ ಬಿಎಸ್‌ಎಫ್ ಮತ್ತು ಎಲ್ಲಾ ಶ್ರೇಣಿಗಳು ಅವರ ಕುಟುಂಬಕ್ಕೆ ತಮ್ಮ ಆಳವಾದ ಸಂತಾಪ ಸೂಚಿಸುತ್ತವೆ ಎಂದು ತಿಳಿಸಲಾಗಿದೆ.

ಜಮ್ಮುವಿನ ಪಲೌರಾದಲ್ಲಿರುವ ಬಿಎಸ್‌ಎಫ್ ಗಡಿ ಪ್ರಧಾನ ಕಚೇರಿಯಲ್ಲಿ ಪೂರ್ಣ ಗೌರವಗಳೊಂದಿಗೆ ಪುಷ್ಪಗುಚ್ಛ ಸಲ್ಲಿಸುವ ಸಮಾರಂಭವನ್ನು ಭಾನುವಾರ ನಡೆಸಲಾಗುವುದು. ಅವರ ಕುಟುಂಬಕ್ಕೆ ಬಿಎಸ್ಎಫ್ ಸಂತಾಪ ಹೇಳಿದ್ದು, ಕುಟುಂಬದವರ ಜೊತೆ ನಾವಿರುತ್ತೇವೆ ಎಂದು ತಿಳಿಸಿದೆ.

ಪೂಂಚ್‌ನಲ್ಲಿ ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಶಹಪುರ ನಿವಾಸಿ ಸುಬೇದಾರ್ ಮೇಜರ್ ಪವನ್ ಕುಮಾರ್ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read