ಸಹೋದರಿಯರಿಗೆ ಸಹೋದರ ಕೊಡಲೇಬೇಕು ಈ ಅಮೂಲ್ಯ ʼಗಿಫ್ಟ್ʼ

ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ರಕ್ಷಾ ಬಂಧನ. ಸಹೋದರನಾದವನು ಸಹೋದರಿಯನ್ನು ಸದಾ ರಕ್ಷಿಸ್ತೇನೆ ಎಂದು ಭರವಸೆ ನೀಡುವ ಹಬ್ಬ. ಸಹೋದರಿಯಾದವಳು ಸಹೋದರನ ಕೈಗೆ ರಾಖಿ ಕಟ್ಟಿದ್ರೆ ಸಹೋದರ ಆಕೆಗೆ ಉಡುಗೊರೆ ನೀಡುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ಚಿನ್ನ, ಬೆಳ್ಳಿ, ಬಟ್ಟೆಯನ್ನೇ ಸಹೋದರನಾದವನು ಉಡುಗೊರೆಯಾಗಿ ನೀಡಬೇಕೆಂದೇನೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಮಹಿಳೆ ಮೇಲಿನ ದಾಳಿ, ಲೈಂಗಿಕ ಕಿರುಕುಳಗಳು ಜಾಸ್ತಿಯಾಗಿವೆ. ಹಾಗಾಗಿ ಸ್ವಯಂ ರಕ್ಷಣೆ ಮಾಡಿಕೊಳ್ಳಬಹುದಾದಂತಹ ಉಡುಗೊರೆಯನ್ನು ಸಹೋದರಿಗೆ ನೀಡುವುದು ಒಳ್ಳೆಯದು.

ಸ್ಟನ್ ಗನ್ : ಇದು ಬ್ಯಾಟರಿ ರೂಪದಲ್ಲಿರುತ್ತದೆ. ಹೈ ವೋಲ್ಟೇಜ್ ಲೈಟ್ ಹೊಂದಿದೆ. ಶಾಕ್ ನೀಡುವುದಲ್ಲದೆ, ದೊಡ್ಡ ಶಬ್ದ ಇದರಿಂದ ಬರುತ್ತದೆ. ಅಪಾಯದಲ್ಲಿರುವ ಮಹಿಳೆ ಇದನ್ನು ಸುಲಭವಾಗಿ ಪ್ರಯೋಗ ಮಾಡಬಹುದಾಗಿದೆ.

ವೈಯಕ್ತಿಕ ಭದ್ರತಾ ಅಲಾರಂ : ದಾಳಿಗೊಳಗಾದಾಗ ಈ ಅಲಾರಂ ಸಹಾಯಕ್ಕೆ ಬರುತ್ತದೆ. ಇದರಿಂದ ದೊಡ್ಡ ಶಬ್ದ ಹೊರ ಬರುವುದರಿಂದ ಸುತ್ತಮುತ್ತಲಿನ ಜನರ ಗಮನ ಸೆಳೆಯುತ್ತದೆ. ಇದನ್ನು ಕೊಂಡೊಯ್ಯುವುದು ಸುಲಭ. ಇದನ್ನು ಕೀ ಚೈನ್ ರೀತಿಯಲ್ಲಿ ಬಳಸಬಹುದಾಗಿದೆ.

ಮಣಿಕಟ್ಟು ಪಟ್ಟಿ : ಇದು ಪಟ್ಟಿಯ ಗಾತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಅಗತ್ಯವಿದ್ದಾಗ ಇದನ್ನು ಅಲಾರಂ ರೀತಿಯಲ್ಲಿ ಬಳಸಬಹುದಾಗಿದೆ. ಎಲ್ಲ ಪ್ರಮುಖ ಆನ್ಲೈನ್ ಶಾಪಿಂಗ್ ಸೈಟ್ ಗಳಲ್ಲಿ ಇದು ಲಭ್ಯವಿದೆ.

ಬೇಟನ್ ಫೋಲ್ಡಿಂಗ್ ಸ್ಟಿಕ್ : ಉದ್ದನೆಯ ಸಲಾಕೆ ಆಕಾರದಲ್ಲಿರುತ್ತದೆ. ದಾಳಿ ಮಾಡಿದಾಗ ಇದನ್ನು ಬಳಸಬಹುದು. ನೈಲಾನ್ ಹಿಡಿಕೆ ಇರುವುದರಿಂದ ಇದನ್ನು ಹಿಡಿದುಕೊಳ್ಳುವುದು ಸುಲಭ. ಹಾಗೆ ಸುಲಭವಾಗಿ ಕೊಂಡೊಯ್ಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read