ಸ್ಕೂಟರ್‌ ಖರೀದಿಗೆ ಹಣ ನೀಡಲು ನಿರಾಕರಣೆ; ಮಾವನ ಮನೆಯಲ್ಲೇ ಕನ್ನ ಹಾಕಿದ ಭೂಪ…!

ಗುಜರಾತ್‌ನ ಸೂರತ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ತಾನು ಸ್ಕೂಟರ್ ಖರೀದಿಸಲು ಹಣ ನೀಡುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದ ನಂತರ ವ್ಯಕ್ತಿಯೊಬ್ಬ ತನ್ನ ಸ್ವಂತ ಸೋದರ ಮಾವನ ಮನೆಯಲ್ಲಿ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಕದ್ದಿದ್ದಾನೆ.

ಆಕ್ಟಿವಾ ಸ್ಕೂಟರ್‌ ಖರೀದಿಸಲು ಕಡಿಮೆ ಬಿದ್ದ 20,000 ರೂಪಾಯಿ ನೀಡಲು ನಿರಾಕರಿಸಿದ್ದರಿಂದ ಮನನೊಂದ ಆರೋಪಿ, ತನ್ನ ಸೋದರ ಮಾವನ ಮನೆಯಲ್ಲಿ ಕಳ್ಳತನ ಮಾಡಲು ನಿರ್ಧರಿಸಿದ್ದ. ಈ ಬಗ್ಗೆ ಸಮಗ್ರ ತನಿಖೆ ನಡೆಸಿದ ಪೊಲೀಸರು ಈಗ ಕಳ್ಳನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಜಯಕುಮಾರ್ ಸುರೇಶಭಾಯಿ ಭಂಡಾರಿ ಎಂದು ಗುರುತಿಸಲಾಗಿದ್ದು, 51,000 ರೂಪಾಯಿ ನಗದು ಮತ್ತು 137.5 ಗ್ರಾಂ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾನೆ ಎಂದು ಹೇಳಲಾಗಿದೆ. ಕಳ್ಳತನ ಮಾಡಿದ ಬಳಿಕ ಕದ್ದ ವಸ್ತುಗಳನ್ನು ಗೋಡೆಯ ಹಿಂದೆ ಬಚ್ಚಿಟ್ಟು ಬಿಳಿ ಸಿಮೆಂಟ್ ಪ್ಲಾಸ್ಟರ್ ಹಾಕಿದ್ದ. ನಂತರ ಅಪರಾಧ ವಿಭಾಗದ ಪೊಲೀಸರು ಗೋಡೆಯಿಂದ 16.22 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸಂತ್ರಸ್ತೆ ಅಮೃತಭಾಯ್ ಬಾಗ್ರಾಭಾಯಿ ಭಂಡಾರಿ ತನ್ನ ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದರು. ಅವರು ಊರಿಗೆ ಬಂದ ಬಳಿಕ ಕಳ್ಳತನ ನಡೆದಿರುವುದು ತಿಳಿದುಬಂದಿದ್ದು, ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದರು.

ಸಾಯಿಬಾಬಾ ಮಂದಿರದಲ್ಲಿ ಆರ್ಚಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ, ಮಾಸಿಕ 5 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸ್ಕೂಟರ್‌ ಖರೀದಿಗೆ ಹಣ ನಿರಾಕರಿಸಿದ್ದಕ್ಕೆ ಮನನೊಂದು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read