ಯಾದಗಿರಿ : ರಾಜ್ಯದಲ್ಲಿ ಹೃದಯಾಘಾತಕ್ಕೆ ಅಣ್ಣ-ತಮ್ಮ ಬಲಿಯಾಗಿದ್ದು, ಇಬ್ಬರು ಸಹೋದರರು ಸಾವಿನಲ್ಲೂ ಒಂದಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಶಂಶೋದ್ದೀನ್ (42) ಇರ್ಫಾನ್ (38 ) ಎಂದು ಗುರುತಿಸಲಾಗಿದೆ.
ತಮ್ಮನಿಗೆ ಹೃದಯಾಘಾತ ಆದ ವಿಚಾರ ತಿಳಿದು ಅಣ್ಣನಿಗೂ ಹೃದಯಾಘಾತವಾಗಿದೆ. ಕೆಂಭಾವಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಹೋದರರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಎದೆನೋವು ಕಾಣಿಸಿಕೊಳ್ಳುತ್ತಿದ್ದಂತೆ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಮೃತಪಟ್ಟಿದ್ದಾರೆ. ಇರ್ಫಾನ್ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರೆ, ಶಂಶೋದ್ದೀನ್ ಕೃಷಿ ಮಾಡುತ್ತಿದ್ದರು.
You Might Also Like
TAGGED:ಹೃದಯಾಘಾತ