ಬಿಟ್ಟೂ ಬಿಡದೆ 22 ಪೆಗ್‌ ಕುಡಿದು ಸಾವನ್ನಪ್ಪಿದ ಪ್ರವಾಸಿಗ….!

ಪೋಲೆಂಡ್‌ನ ಕ್ರಾಕೋವ್‌ನಲ್ಲಿರುವ ಸ್ಟ್ರಿಪ್ ಕ್ಲಬ್‌ನಲ್ಲಿ 90 ನಿಮಿಷಗಳಲ್ಲಿ 22 ಪೆಗ್‌ ಡ್ರಿಂಕ್ಸ್‌ ಮಾಡಿದ ಕಾರಣದಿಂದಾಗಿ ಮಾರ್ಕ್ ಸಿ ಎಂದು ಗುರುತಿಸಲಾದ ಬ್ರಿಟಿಶ್ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಅವರು ವೈಲ್ಡ್ ನೈಟ್ಸ್ ಎಂಬ ಕ್ಲಬ್‌ಗೆ ಭೇಟಿ ನೀಡಿದಾಗ ಸ್ನೇಹಿತನೊಂದಿಗೆ ಕುಡಿಯುತ್ತಿದ್ದರು. ಸ್ನೇಹಿತ ಹೆಚ್ಚಿಗೆ ಕುಡಿಯುವುದನ್ನು ವಿರೋಧಿಸಿದರೂ ಕೇಳದೇ ಅತಿಯಾಗಿ ಕುಡಿದಿದ್ದರಿಂದ ಅಲ್ಲಿಯೇ ಸಾವನಪ್ಪಿದ್ದಾರೆ.

ಪೋಲೆಂಡ್‌ನ ರಾಷ್ಟ್ರೀಯ ಪ್ರಾಸಿಕ್ಯೂಟರ್ ಕಚೇರಿಯ ಈ ಪ್ರವಾಸಿಗ ರಕ್ತದಲ್ಲಿ ಕನಿಷ್ಠ 0.4 ಪ್ರತಿಶತದಷ್ಟು ಪ್ರಮಾಣದ ಆಲ್ಕೋಹಾಲ್ ಅಂಶವನ್ನು ಹೊಂದಿದ್ದರು ಎಂದು ವರದಿಯಾಗಿದೆ. ಇದನ್ನು ಮಾರಕವೆಂದು ಪರಿಗಣಿಸಲಾಗಿದೆ. ಇನ್ನು ಶೋಚನೀಯ ಸಂಗತಿ ಎಂದರೆ ಮಾರ್ಕ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಅವರ ಬಳಿ ಇದ್ದ 420 ಪೌಂಡ್ ಅನ್ನು ದೋಚಲಾಗಿದೆ. ಸದ್ಯ 58 ಜನರ ವಿರುದ್ಧ ದೂರು ದಾಖಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read