ಭಾರತೀಯ ಖಾದ್ಯ ತಯಾರಿಸಿದ ಅನುಭವ ಹಂಚಿಕೊಂಡ ಬ್ರಿಟಿಷ್ ರಾಯಭಾರಿ

ಆಹಾರ ಪದ್ಧತಿಗಳು ಯಾವುದೇ ದೇಶದ ಸಾಂಸ್ಕೃತಿಕ ಸೂಚಕಗಳಾಗಿವೆ. ಭಾರತದ ಖಾದ್ಯ ಪರಂಪರೆ ಎಷ್ಟು ವೈವಿಧ್ಯಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ.

ಭಾರತದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ ಬ್ರಿಟನ್‌ ರಾಯಭಾರಿಯೊಬ್ಬರು ತಾವು ಭಾರತೀಯ ಖಾದ್ಯವೊಂದನ್ನು ತಯಾರಿಸಿದ ವಿಚಾರವನ್ನು ಹಂಚಿಕೊಂಡಿದ್ದಾರೆ.

“ಕಳೆದ ರಾತ್ರಿ ನನ್ನ ತಂದೆಗೆ ಆರೋಗ್ಯ ಸರಿಯಿಲ್ಲದ ಕಾರಣ ನಾನು ಅಡುಗೆ ಮನೆಗೆ ಹೋಗಬೇಕಾಯಿತು. ಹೈದರಾಬಾದ್‌ನಲ್ಲಿ ನನ್ನ ಐದು ವರ್ಷಗಳ ವಾಸ್ತವ್ಯದ ವೇಳೆ ನಾನು ಕಲಿತ ಭಾರತೀಯ ಖಾದ್ಯವೊಂದರ ಬ್ರಿಟಿಷ್‌ ಅವತಾರವನ್ನು ಅವರಿಗೆ ಉಣಬಡಿಸಿದೆ,” ಎಂದು ಡಾ. ಆಂಡ್ರ‍್ಯೂ ಫ್ಲೆಮಿಂಗ್ ಖಾದ್ಯದ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.

ತಂದೆಯ ಆರೈಕೆ ಮಾಡಿದ ಡಾ. ಆಂಡ್ರ‍್ಯೂ ಫ್ಲೆಮಿಂಗ್‌ ಬಗ್ಗೆ ನೆಟ್ಟಿಗರು ಶ್ಲಾಘನೆಯ ಕಾಮೆಂಟ್‌ಗಳನ್ನು ಹರಿಸಿದ್ದಾರೆ.

https://twitter.com/Andrew007Uk/status/1642788630774136834?ref_src=twsrc%5Etfw%7Ctwcamp%5Etweetem

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read