ತಿರುವನಂತಪುರಂ: ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಷ ಮಾಡಿದ್ದ ಘಟನೆ ಬೆನ್ನಲ್ಲೇ ಇದೀಗ ಬ್ರಿಟೀಷ್ ಫಟರ್ ಜೆಟ್ ತುರ್ತು ಭೂಸ್ಪರ್ಶವಾದ ಘಟನೆ ನಡೆದಿದೆ.
ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬ್ರಿಟೀಷ್ F-35 ಯುದ್ಧ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಹಿಂದೂ ಮಹಾಸಾಗರದ ಮೇಲೆ ಹಾರಾಟ ನಡೆಸುವಾಗ ಇಂಧನ ಕಡಿಮೆ ಇರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ 9:30ರ ಸುಮಾರಿಗೆ ತುರ್ತು ಲ್ಯಾಂಡಿಂಗ್ ಗೆ ಅನುಮತಿ ಕೋರಲಾಯಿತು. ಬಳಿಕ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಜೆಟ್ ಯುಕೆಯ HMS ಪ್ರಿನ್ಸ್ ಆಫ್ ವೇಲ್ಸ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ನ ಒಂದು ಭಾಗವಾಗಿದ್ದು ಇದನ್ನು ಪ್ರಸ್ತುತ ಇಂಡೋ-ಫೆಸಿಫಿಕ್ ನಲ್ಲಿ ನಿಯೋಜಿಸಲಾಗಿದೆ.