180 ದಿನದಲ್ಲಿ ಪ್ರಪಂಚ ಪರ್ಯಟನೆ ಮಾಡಿದ ಬ್ರಿಟನ್ ದಂಪತಿ; ಸೈಕಲ್ ಏರಿ 18‌,000 ಕಿ.ಮೀ. ಪಯಣ

ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು. ಅದಕ್ಕೆ ಈ ದಂಪತಿಗಳು ಸಾಕ್ಷಿಯಾಗಿದ್ದಾರೆ. ಸ್ಟಿವ್ ಮಸ್ಸೆ ಮತ್ತು ಲಾರಾ ಮಸ್ಸೆ, ಇವರಿಬ್ಬರ ಬಹುದಿನದ ಕನಸು ಪ್ರಪಂಚ ಪರ್ಯಟನೆ ಮಾಡುವುದು. ಹಾಗಂತ ಅವರು ಯಾವುದೇ ಫ್ಲೈಟ್ ಬುಕ್ ಮಾಡ್ಲಿಲ್ಲ ಬದಲಾಗಿ ಟಂಡೈಮ್ ಅನ್ನೊ ಸೈಕಲ್ ಒಂದನ್ನ ಬುಕ್ ಮಾಡಿದರು. ಇದು ನೋಡುವುದಕ್ಕೆ ಒಂದೇ ಸೈಕಲ್ನಂತೆ ಇದ್ದರೂ, ಇಬ್ಬರೂ ತುಳಿಯುವಂತ ವ್ಯವಸ್ಥೆ ಇರುವ ವಿಶೇಷ ಸೈಕಲ್.

ಈ ಸೈಕಲ್‌ನ್ನೇ ತಮ್ಮ ಪ್ರೀತಿಯ ಅಂಬಾರಿ ಏರಿ, ಯುಕೆಯ ಡರ್ಬಿಯಿಂದ ಸೈಕಲ್ ತುಳಿಯೊದಕ್ಕೆ ಹೊರಟೇ ಬಿಟ್ಟಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ ಕೇವಲ 180 ದಿನದಲ್ಲಿ 18,000 ಕಿಲೋ ಮೀಟರ್ ಸೈಕಲ್ ತುಳಿದಿದ್ದಾರೆ. ಇದು ಈಗ ವಿಶ್ವದಾಖಲೆಯಾಗಿದೆ. ವಿಶೇಷ ಏನಂದ್ರೆ ಈ ಜೋಡಿ ಭಾರತದ ಗುಂಡಿಗಳಿಂದ ಕೂಡಿದ್ದ ರಸ್ತೆಗಳಲ್ಲೂ ನಿರಾಯಾಸವಾಗಿ ಸೈಕಲ್ ತುಳಿದಿದ್ದಾರೆ.

ಇವರು ಹೀಗೆ ಸೈಕಲ್‌ನಲ್ಲಿ ಪ್ರಯಾಣ ಮಾಡುತ್ತಿರುವಾಗ ಇವರಿಗೆ ಅನೇಕ ಸವಾಲುಗಳು ಎದುರಾಗಿದೆ. ಕೆನಡಾದಲ್ಲಿ ಹಿಮದಿಂದ ಕೂಡಿದ ರಸ್ತೆಗಳು, ಜಾರ್ಜಿಯಾದಲ್ಲಿ ವೀಸಾ ಸಮಸ್ಯೆ ಹೀಗೆ ನಾನಾ ಸವಾಲುಗಳನ್ನ ಎದುರಿಸಿಯೇ ಕೊನೆಗೆ ಬರ್ಲಿನ್ ಬ್ರಾಂಡೆನ್ ಬರ್ಗ ಗೇಟ್ ಬಳಿ ಪ್ರಯಾಣಕ್ಕೆ ಅಂತ್ಯ ಹೇಳಿದ್ದಾರೆ. ಈ ಪ್ರಯಾಣದ ವೇಳೆಯಲ್ಲಿ ಅನೇಕ ಬಾರಿ ಇವರ ಆರೋಗ್ಯವೂ ಹದಗೆಟ್ಟಿದೆ.

ಈ ದಂಪತಿ ಜೂನ್ 5ರಂದು ತಮ್ಮ ಸೈಕಲ್ ಸವಾರಿ ಆರಂಭಿಸಿದ್ದರು. ವರ್ಷದ ಅಂತ್ಯದ ವೇಳೆಗೆ ಈ ಜೋಡಿ ಸುಮಾರು 18000 ಕಿಲೋ ಮೀಟರ್ ಸೈಕಲ್‌ನಲ್ಲಿ ಸುತ್ತಿದ್ದಾರೆ. ಈ ಸುದೀರ್ಘ ಪ್ರಯಾಣದಲ್ಲಿ ಈ ಜೋಡಿ ಸುಮಾರು 21ರಾಷ್ಟ್ರಗಳಿಗೆ ಭೇಟಿ ಕೊಟ್ಟಿದ್ದಾರೆ.

ಆಸ್ಟ್ರೇಲಿಯಾ, ಕೆನಡಾ, ಥೈಲ್ಯಾಂಡ್, ಭಾರತ, ಮಲೇಶಿಯಾ, ಜಾರ್ಜಿಯಾ, ನ್ಯೂಜಿಲ್ಯಾಂಡ್, ಹಂಗರಿ, ಚೆಕಿಯಾ, ಆಸ್ಟ್ರಿಯಾ, ರೊಮೆನಿಯಾ, ತುರ್ಕಿ, ಜಾರ್ಜಿಯಾ ಮತ್ತು ಬುಲ್ಗೆರಿಯಾ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಈ ಜೋಡಿ ಈ ಮೊದಲೇ ಇದ್ದ ವಿಶ್ವ ದಾಖಲೆಯನ್ನ 83ದಿನಗಳ ಅಂತರದಲ್ಲಿ ಬ್ರೇಕ್ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read