BIG NEWS: ಗುಜರಾತ್ ನಲ್ಲಿ ಕುಸಿದು ಬಿದ್ದ ಸೇತುವೆ; 15 ಗ್ರಾಮಗಳ ಸಂಪರ್ಕ ಕಡಿತ

ಗುಜರಾತ್‌ನ ತಾಪಿ ಜಿಲ್ಲೆಯಲ್ಲಿ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಬಿದ್ದಿದೆ. ಸೇತುವೆಯನ್ನು ಮಿಂಧೋಲಾ ನದಿಯ ಮೇಲೆ ಸಂಪರ್ಕಕ್ಕಾಗಿ ನಿರ್ಮಿಸಲಾಗಿದೆ. ಈ ಸೇತುವೆಯು ತಾಪಿಯ ವ್ಯಾರ ತಾಲೂಕಿನ ಮೈಪುರ ಮತ್ತು ದೇಗಾಮ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಅದರ ಕುಸಿತದಿಂದ ಸುಮಾರು 15 ಹಳ್ಳಿಗಳಿಗೆ ತೊಂದರೆಯಾಗಿದೆ.

ಸೇತುವೆ ಕುಸಿತದ ಕುರಿತು ಮಾತನಾಡಿದ ಕಾರ್ಯಪಾಲಕ ಇಂಜಿನಿಯರ್ ನೀರವ್ ರಾಥೋಡ್, 2021 ರಲ್ಲಿ 2 ಕೋಟಿ ವೆಚ್ಚದಲ್ಲಿ ಸೇತುವೆಯ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿತ್ತು. ತಜ್ಞರಿಂದ ತನಿಖೆ ನಡೆದ ಬಳಿಕ ಸೇತುವೆ ಕುಸಿತಕ್ಕೆ ಕಾರಣ ತಿಳಿಯಲಿದೆ ಎಂದಿದ್ದಾರೆ. ನಿರ್ಮಾಣವಾದ 2 ವರ್ಷಕ್ಕೇ ಸೇತುವೆ ಕುಸಿದಿದ್ದು ಗುಣಮಟ್ಟದ ಬಗ್ಗೆ ಪ್ರಶ್ನಿಸುವಂತಾಗಿದೆ.

ಇತ್ತೀಚೆಗೆ ಜೂನ್ 4 ರಂದು ಬಿಹಾರದ ಭಾಗಲ್ಪುರದಲ್ಲಿ ಆಗುವನಿ-ಸುಲ್ತಂಗಂಜ್ ಸೇತುವೆ ಕುಸಿದಿತ್ತು. ಗಂಗಾ ನದಿಯ ಮೇಲೆ ಭಾಗಲ್ಪುರ ಮತ್ತು ಖಗರಿಯಾ ಜಿಲ್ಲೆಗಳನ್ನು ಸಂಪರ್ಕಿಸಲು ಸೇತುವೆಯನ್ನು ನಿರ್ಮಿಸಲಾಗಿದೆ. 1,770 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಲ್ಲಿ ನಿರ್ಮಿಸ್ತಿದ್ದ ಸೇತುವೆ ಕುಸಿದು ಬಿದ್ದಿದ್ರಿಂದ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.

https://twitter.com/AHindinews/status/1668859814389383168?ref_src=twsrc%5Etfw%7Ctwcamp%5Etweetembed%7Ctwterm%5E1668859814389383168%7Ctwgr%5E6cf2b1a25797520cb2d7b6029a14f7a07d5a8abb%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fbridgecollapseingujaratphotosbridgecollapsesintapidistrictabout15villagesaffected-newsid-n509237184

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read