ಪಾದರಕ್ಷೆ ಬಚ್ಚಿಟ್ಟು ವರನ ಬಳಿ ಹಣಕ್ಕೆ ಬೇಡಿಕೆ ; 50 ರ ಬದಲು 5 ಸಾವಿರ ನೀಡಿದ್ದಕ್ಕೆ ʼಭಿಕಾರಿʼ ಎಂದು ಕರೆದು ಹಲ್ಲೆ | Watch

ತನ್ನ ಮದುವೆಯಲ್ಲಿ ‘ಪಾದರಕ್ಷೆಗಳನ್ನು ಬಚ್ಚಿಡುವʼ ವಿಧಿಯ ವೇಳೆ ವಧುವಿನ ಕಡೆಯವರಿಗೆ ₹50,000 ಬದಲು ₹5,000 ನೀಡಿದ್ದಕ್ಕಾಗಿ ವರನಿಗೆ ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ವರನ ಕಂಜೂಸ್ ವರ್ತನೆಗೆ ವಧುವಿನ ಕಡೆಯ ಮಹಿಳೆಯರು ಆತನನ್ನು ʼಭಿಕಾರಿʼ ಎಂದು ಕರೆದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ವಧುವಿನ ಕಡೆಯವರು ವರನನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ದೊಣ್ಣೆಗಳಿಂದ ಥಳಿಸಿದ್ದಾರೆ. ಈ ಘಟನೆ ಶನಿವಾರ ನಡೆದಿದ್ದು, ಉತ್ತರಾಖಂಡದ ಚಕ್ರಾತಾದ ಮುಹಮ್ಮದ್ ಶಬ್ಬೀರ್ ತನ್ನ ಕುಟುಂಬ ಮತ್ತು ಅತಿಥಿಗಳೊಂದಿಗೆ ಬಿಜ್ನೋರ್‌ಗೆ ಮೆರವಣಿಗೆಯಲ್ಲಿ ಬಂದಿದ್ದನು.

ಮದುವೆಯ ವಿಧಿವಿಧಾನಗಳ ನಡುವೆ, ವಧುವಿನ ಸಹೋದರಿ ಶಬ್ಬೀರ್‌ನ ಶೂಗಳನ್ನು ಕದ್ದು ಅವನಿಂದ ₹50,000 ಹಣವನ್ನು ಒತ್ತಾಯಿಸಿದಳು. ಶಬ್ಬೀರ್ ₹5,000 ನೀಡಿ ತನ್ನ ಶೂಗಳನ್ನು ಹಿಂದಿರುಗಿಸುವಂತೆ ಕೇಳಿದ್ದಾನೆ. ಇದರ ನಂತರ, ವಧುವಿನ ಕಡೆಯ ಕೆಲವು ಮಹಿಳೆಯರು ಅವನನ್ನು ಗೇಲಿ ಮಾಡಿ ಭಿಕಾರಿ ಎಂದು ಕರೆದರು.

ಶಬ್ಬೀರ್‌ನನ್ನು ಭಿಕಾರಿ ಎಂದು ಕರೆದಿದ್ದರಿಂದ ಎರಡು ಕುಟುಂಬಗಳ ನಡುವೆ ವಾಗ್ವಾದ ಉಂಟಾಗಿ ಅದು ಅಂತಿಮವಾಗಿ ದೈಹಿಕ ಘರ್ಷಣೆಗೆ ತಿರುಗಿತು. ವರನ ಸಂಬಂಧಿಕರು ತಮ್ಮನ್ನು ವಧುವಿನ ಕಡೆಯವರು ಕೋಣೆಯೊಂದರಲ್ಲಿ ಕೂಡಿ ಹಾಕಿ ದೊಣ್ಣೆಗಳಿಂದ ಹಲ್ಲೆ ಮಾಡಿದರು ಎಂದು ಆರೋಪಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ, ವಧುವಿನ ಕಡೆಯವರು ಶಬ್ಬೀರ್‌ನ ಕುಟುಂಬದವರು ಉಡುಗೊರೆಯಾಗಿ ಪಡೆದ ಚಿನ್ನದ ಗುಣಮಟ್ಟವನ್ನು ಪ್ರಶ್ನಿಸಿದಾಗ ಸಂಘರ್ಷ ತೀವ್ರಗೊಂಡಿತು ಎಂದು ವಾದಿಸಿದ್ದಾರೆ.

ವಧುವಿನ ಸಹೋದರನ ಪ್ರಕಾರ, ತಮ್ಮ ಆದ್ಯತೆಗಳ ಬಗ್ಗೆ ಕೇಳಿದಾಗ, ಶಬ್ಬೀರ್‌ನ ಕುಟುಂಬದವರು ವಧುವಿಗಿಂತ ಹಣವೇ ಮುಖ್ಯ ಎಂದು ಹೇಳಿದ್ದಾರೆ ಎನ್ನಲಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಎರಡೂ ಕಡೆಯವರನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದರು.

ನಂತರ, ಎರಡೂ ಕುಟುಂಬಗಳ ಪ್ರತಿನಿಧಿಗಳು ಬಿಜ್ನೋರ್‌ನ ನಜೀಬಾಬಾದ್ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿಗಳಿಗೆ ತಮ್ಮ ತಮ್ಮ ಕಡೆಯ ಘಟನೆಗಳ ವಿವರಣೆಯನ್ನು ನೀಡಿದರು. ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಕುಟುಂಬಗಳು ಪರಸ್ಪರ ಒಪ್ಪಂದಕ್ಕೆ ಬಂದಿವೆ ಎಂದು ನಜೀಬಾಬಾದ್ ವಲಯದ ಅಧಿಕಾರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read