ಹೈದರಾಬಾದ್: ಮದುಯೆಯ ಮೊದಲದಿನ ರಾತ್ರಿಯೇ ವಧು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಪೆನುಕೊಂಡದಲ್ಲಿ ನಡೆದಿದೆ.
ಇಲ್ಲಿನ ಸೋಮಂಡೆಪಲ್ಲಿಯಲ್ಲಿ ಈ ಘಟನೆ ನಡೆದಿದೆ. ಹರ್ಷಿತಾ (22) ಆತ್ಮಹತ್ಯೆಗೆ ಶರಣಾದ ವಧು. ಅದ್ದೂರಿ ವಿವಾಹ ಸಮಾರಂಭ ನಡೆದ ಕೆಲವೇ ಗಂಟೆಗಳಲ್ಲಿ ವಧು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹರ್ಷಿತಾ ಕರ್ನಾಟಕ ಮೂಲದ ನಾಗೇಂದ್ರ ಎಂಬುವವರನ್ನು ವಿವಾಹವಾಗಿದ್ದರು. ದಂಪತಿ ಪೆನುಕೊಂಡದ ವಧುವಿನ ಮನೆಯಲ್ಲಿದ್ದರು. ಮೊದಲ ರಾತ್ರಿಗೆ ಸಿದ್ಧತೆ ನಡೆದಿತ್ತು. ವರ ನಾಗೇಂದ್ರ ಸಿಹಿತಿಂಡಿ ತರಲೆಂದು ಹೊರಗೆ ಹೋಗಿದ್ದರು. ಅವರು ಮನೆಗೆ ಹಿಂದಿರುಗುವಷ್ಟರಲ್ಲಿ ಕೋಣೆ ಒಳಗಿನಿಂದ ಲಾಕ್ ಆಗಿತ್ತು. ಬಾಗಿಲು ಬಡಿದರೂ ವಧು ಬಾಗಿಲು ತೆರೆದಿಲ್ಲ. ಕುಟುಂಬ ಸದಸ್ಯರು ರೂಮಿನ ಬಾಗಿಲು ಒಡೆದು ನೋಡಿದಾಗ ಹರ್ಷಿತಾ ಆತಮಹತ್ಯೆಗೆ ಶರಣಾಗಿದ್ದರು.
ತಕ್ಷಣ ಆಕೆಯನ್ನು ಪೆನುಕೊಂಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹರ್ಷಿತಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮದುವೆ ದಿನವೇ ವಧು ಆತ್ಮಹತ್ಯೆ ಎರಡೂ ಕುಟುಂಬಕ್ಕೂ ಆಘಾತ ತಂದಿದೆ.