ಊಟಕ್ಕೆ ಸಿಹಿ ತಿಂಡಿ ನೀಡಿಲ್ಲವೆಂದು ಮದುವೆಯೇ ಕ್ಯಾನ್ಸಲ್

ಮಡಿಕೇರಿ: ಮದುವೆ ಹಿಂದಿನ ದಿನ ರಾತ್ರಿ ಊಟಕ್ಕೆ ಸಿಹಿ ತಿಂಡಿ ನೀಡದ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆಯ ಕಲ್ಯಾಣ ಮಂಟಪವೊಂದರಲ್ಲಿ ನಡೆದಿದೆ.

ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದ ಯುವತಿಯ ಮದುವೆ ತುಮಕೂರು ಜಿಲ್ಲೆಯ ಯುವಕನೊಂದಿಗೆ ನಿಶ್ಚಯವಾಗಿತ್ತು. ಮದುವೆ ಹಿಂದಿನ ರಾತ್ರಿ ಊಟದಲ್ಲಿ ಸಿಹಿ ತಿಂಡಿ ನೀಡಿಲ್ಲವೆಂದು ವಧು, ವರರ ಕಡೆಯವರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದಿದೆ.

ಈ ವೇಳೆ ವರ ಮದುವೆಯೇ ಬೇಡವೆಂದು ಉಂಗುರ ಕಳಚಿ ಕೊಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ ಪ್ರಕರಣ ಪೋಲಿಸ್ ಠಾಣೆ ಮೆಟ್ಟಿಲೇರಿದ್ದು, ವರ ನಾನು ಇದೇ ಯುವತಿಯನ್ನು ಮದುವೆಯಾಗುತ್ತೇನೆ ಎಂದು ತಿಳಿಸಿದ್ದಾನೆ. ಆದರೆ, ಘಟನೆಯಿಂದ ಬೇಸತ್ತ ಯುವತಿ ನನಗೆ ಮದುವೆ ಬೇಡ ಎಂದು ಪೊಲೀಸರ ಎದುರು ಹೇಳಿಕೆ ನೀಡಿದ್ದು, ಮದುವೆ ಮುರಿದು ಬಿದ್ದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read