ಮದುವೆಗೆ ತನ್ನೆಲ್ಲಾ ಮಾಜಿ ಬಾಯ್ ​ಫ್ರೆಂಡ್​ಗಳನ್ನು ಕರೆದು ಒಟ್ಟಿಗೆ ಕೂರಿಸಿದ ವಧು…..!

ಬೀಜಿಂಗ್​: ನಿಮ್ಮ ಮಾಜಿ ಪ್ರೇಮಿಯ ಮೇಲೆ ಸೇಡು ತೀರಿಸಿಕೊಳ್ಳಲು ನೀವು ಯೋಚಿಸುತ್ತಿದ್ದರೆ, ಚೀನಾದ ಈ ವಧು ನಿಮ್ಮ ಸ್ಫೂರ್ತಿಯಾಗಬಹುದು. ತನ್ನ ಎಲ್ಲಾ ಮಾಜಿ ಗೆಳೆಯರನ್ನು ಮದುವೆಗೆ ಆಹ್ವಾನಿಸಿ ಈಕೆ ಸೇಡು ತೀರಿಸಿಕೊಂಡಿದ್ದಾಳೆ.

ಮಾತ್ರವಲ್ಲದೆ ಅವರನ್ನು ಒಂದೇ ರೌಂಡ್ ಟೇಬಲ್‌ನಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಾಳೆ. ಆಕೆಯ ಮಾಜಿ ಗೆಳೆಯರು ತಮ್ಮ ಜೀವನದಲ್ಲಿ ಏನನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ತೋರಿಸುವುದು ಈಕೆಯ ಉದ್ದೇಶವಾಗಿತ್ತು.

ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ವಧುವಿನ ಮದುವೆಯ ಕಿರು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತಕ್ಷಣವೇ ವೈರಲ್ ಆಗಿದೆ. ವರದಿಯ ಪ್ರಕಾರ, ಇದರಲ್ಲಿ ವಧುವಿನ ಮಾಜಿ ಬಾಯ್​ಫ್ರೆಂಡ್​ಗಳು ಪರಸ್ಪರ ಪಕ್ಕದಲ್ಲಿ ಕುಳಿತಿರುವುದನ್ನು ನೋಡಬಹುದು.

ವೀಡಿಯೋವನ್ನು ಚೀನಾದ ಹುಬೈ ಪ್ರಾಂತ್ಯದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಸಮಾರಂಭವನ್ನು ಜನವರಿ 8 ರಂದು ನಡೆಸಲಾಯಿತು. “ಮಾಜಿ ಬಾಯ್‌ಫ್ರೆಂಡ್‌ಗಳ ಟೇಬಲ್” ಎಂದು ಟೇಬಲ್​ ಮೇಲೆ ಬರೆಯಲಾಗಿತ್ತು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಇಷ್ಟು ಬಾಯ್​ಫ್ರೆಂಡ್​ಗಳನ್ನು ಈಕೆ ನಿಭಾಯಿಸುತ್ತಿದ್ದಳು ಎಂದರೆ ಈಕೆ ಭಾರಿ ಚಾಲಾಕಿಯೇ ಇರಬೇಕು ಎಂದು ಕೆಲವರು ಕಮೆಂಟ್​ ಹಾಕಿದ್ದರೆ, ಪಾಪ ಆ ವರನ ಗತಿ ಏನಾಗಿರಬೇಕು ಎಂದು ಇನ್ನು ಹಲವರು ಪ್ರಶ್ನಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read