ವಧುವನ್ನು ಎತ್ತಿಕೊಳ್ಳಲು ಹೋಗಿ ಮುಜುಗರಕ್ಕೊಳಗಾದ ವರ; ವಿಡಿಯೋ ನೋಡಿದ್ರೆ ನೀವೂ ನಕ್ಕು ಬಿಡ್ತೀರಿ….!

‘ಮದುವೆ’ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ಮಹತ್ತರ ಘಟ್ಟ. ಈ ಸಮಾರಂಭ ಎರಡು ಜೀವಗಳ ಮಧ್ಯೆ ಮಾತ್ರವಲ್ಲದೆ ಎರಡು ಕುಟುಂಬಗಳನ್ನು ಸಹ ಬೆಸೆಯುತ್ತದೆ. ಇಂತಹ ಮಹತ್ತರ ಸಮಾರಂಭವನ್ನು ಅವಿಸ್ಮರಣೀಯವಾಗಿಸಿಕೊಳ್ಳಲು ಬಹುತೇಕರು ಬಯಸುತ್ತಾರೆ. ಆದರೆ ಕೆಲವೊಮ್ಮೆ ತಿಳಿಯದೆ ನಡೆಯುವ ಘಟನೆಗಳು ಮುಜುಗರಕ್ಕೆ ಅಥವಾ ತಮಾಷೆಗೆ ಕಾರಣವಾಗುತ್ತದೆ. ಅಂತಹ ಘಟನೆಯೊಂದರ ವಿಡಿಯೋ ಇಲ್ಲಿದೆ.

ಈ ಮದುವೆ ಸಮಾರಂಭ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಇದನ್ನು ಹಂಚಿಕೊಳ್ಳಲಾಗಿದ್ದು, ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಅಷ್ಟೇ ಅಲ್ಲ, ಮದುವೆಗೆ ಬಂದಿದ್ದ ಅತಿಥಿಗಳ ಮುಂದೆ ಮಜುಗರಕ್ಕೊಳಗಾದ ವರನ ಪರಿಸ್ಥಿತಿ ಕಂಡು ಮರುಗಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ತನ್ನ ಪತಿಯ ಬೆಂಬಲಕ್ಕೆ ನಿಂತ ವಧುವಿನ ನಡೆಯನ್ನು ಕೊಂಡಾಡಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನೆಂದರೆ ಮದುವೆ ಸಮಾರಂಭ ಮುಗಿದ ಬಳಿಕ ವರ ತನ್ನ ವಧುವನ್ನು ಅತಿಥಿಗಳ ಮುಂದೆ ಎತ್ತಿಕೊಳ್ಳಲು ಮುಂದಾಗಿದ್ದಾನೆ. ಅದರಲ್ಲಿ ಆತ ಸಫಲನಾದರೂ ಸಹ ಅವನ ಪ್ಯಾಂಟ್ ಬಟನ್ ಬಿಚ್ಚಿಕೊಳ್ಳುತ್ತದೆ. ಇದರ ಪರಿಣಾಮ ಪ್ಯಾಂಟ್ ಉದುರತೊಡಗಿದ್ದು, ಪರಿಸ್ಥಿತಿಯನ್ನು ಅರಿತ ಆತ ತಡಬಡಾಯಿಸಿ ವಧುವನ್ನು ಕೆಳಗಿಳಿಸಿದ್ದಾನೆ. ಜೊತೆಗೆ ತನ್ನ ಪ್ಯಾಂಟ್ ಸರಿಪಡಿಸಿಕೊಳ್ಳಲು ಯತ್ನಿಸಿದ್ದು, ಇದೆಲ್ಲವನ್ನು ಗಮನಿಸಿದ ವಧು ನಗುನಗುತ್ತಲೇ ಆತನನ್ನು ಮರೆಗೆ ತಳ್ಳಿಕೊಂಡು ಹೋಗುತ್ತಾಳೆ. ನೀವೂ ಕೂಡ ಈ ವಿಡಿಯೋ ನೋಡಿ ಒಮ್ಮೆ ನಕ್ಕು ಬಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read