ಮದುವೆ ಸಮಾರಂಭದಲ್ಲಿ ಸಿಹಿ ತಿನಿಸುವ ವಿಚಾರಕ್ಕೆ ವಧು ಮತ್ತು ವರನ ನಡುವಿನ ಜಗಳ ಮಿತಿಮೀರಿದ್ದು ಅವರ ನಡೆಯ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ವಧು-ವರರು ವೇದಿಕೆಯ ಮೇಲೆ ಪರಸ್ಪರ ಸಿಹಿ ತಿನ್ನಿಸುವ ಆಚರಣೆ ಮಾಡಿದ್ದಾರೆ. ಮೊದಲು ವಧು ವರನಿಗೆ ಸಿಹಿ ತಿನ್ನಿಸುತ್ತಾಳೆ. ಬಳಿಕ ವರ ವಧುವಿಗೆ ಸಿಹಿ ತಿನಿಸಲು ಮುಂದಾದಾಗ ಆಕೆ ನಿರ್ಲಕ್ಷಿಸಿ ಮುಖವನ್ನು ಪಕ್ಕಕ್ಕೆ ಸರಿಸುತ್ತಾಳೆ. ಸಿಹಿ ತಿನಿಸಲು ಎಷ್ಟೇ ಪ್ರಯತ್ನಿಸಿದರೂ ವಧು ಇದೇ ರೀತಿ ವರ್ತಿಸುತ್ತಾಳೆ. ಇದಕ್ಕೆ ಕೋಪಗೊಂಡ ವರ, ವಧುವನ್ನು ಹಿಡಿದು ಬಲವಂತವಾಗಿ ಸಿಹಿತಿಂಡಿಗಳನ್ನು ತಿನ್ನಿಸಲು ಪ್ರಯತ್ನಿಸುತ್ತಾನೆ.
ಇದರಿಂದ ಕೋಪಗೊಂಡ ವಧು ಎಲ್ಲವನ್ನೂ ಮಧ್ಯದಲ್ಲಿಯೇ ಬಿಟ್ಟು ವೇದಿಕೆಯಿಂದ ಇಳಿದು ಹೋಗುತ್ತಾಳೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಅಚ್ಚರಿಯ ಜೊತೆಗೆ ವ್ಯಂಗ್ಯವಾಡಿದ್ದಾರೆ.
— Unknown (@comedykarna) June 11, 2024