Video | ಮದುವೆ ಮಂಟಪದಲ್ಲಿ ವಧುವನ್ನು ಅನುಚಿತವಾಗಿ ಸ್ಪರ್ಶಿಸಿದ ಸಂಬಂಧಿ; ಮದುಮಗಳಿಂದ ‘ಕಪಾಳ ಮೋಕ್ಷ’

ಮದುವೆಯ ದಿನ ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ದಿನ. ಹೊಸ ಜೀವನಕ್ಕೆ ಕಾಲಿಡುವ ಆ ಕ್ಷಣವನ್ನು ಸುಂದರಗೊಳಿಸಲು ಮತ್ತು ಚಿರಸ್ಥಾಯಿಯಾಗಿ ಅದ್ಭುತ ನೆನಪಾಗಿ ಉಳಿಯುವಂತೆ ಮಾಡಲು ಅನೇಕ ಪ್ರಯತ್ನಗಳು ನಡೆಯುತ್ತವೆ. ಆದರೆ ಸುಂದರ ಕ್ಷಣ ಅಲ್ಲಿ ಗದ್ದಲದ ನೆನಪಾಗಿ ಮಾರ್ಪಟ್ಟಿತು. ವರನ ಜೊತೆ ವೇದಿಕೆಯಲ್ಲಿ ನಿಂತಿದ್ದ ವಧುವನ್ನು ಸಂಬಂಧಿಕರು ಅನುಚಿತವಾಗಿ ಮುಟ್ಟಿದ್ದಕ್ಕೆ ವಧು ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.

ಈ ವಿಡಿಯೋ ವೈರಲ್ ಆಗಿದ್ದು ವಧು-ವರರು ವೇದಿಕೆಯ ಮೇಲೆ ನಿಂತಿದ್ದಾರೆ, ಸ್ನೇಹಿತರು ಮತ್ತು ಕುಟುಂಬದವರು ಸುತ್ತುವರೆದಿದ್ದಾರೆ. ಹಾರ ವಿನಿಮಯ ಕಾರ್ಯಕ್ರಮ ಆರಂಭವಾಗುವವರೆಗೂ ಎಲ್ಲವೂ ಸುಸೂತ್ರವಾಗಿ ನಡೆದಂತೆ ಕಾಣುತ್ತಿತ್ತು. ಆ ವೇಳೆ ಪುರುಷ ಸಂಬಂಧಿಯೊಬ್ಬ ವಧುವನ್ನು ಹಿಂದಿನಿಂದ ಹಿಡಿದುಕೊಂಡಿದ್ದಾನೆ.

ಈ ಅಗೌರವದ ಕೃತ್ಯಕ್ಕೆ ಕೆರಳಿದ ವಧು ಹಿಂಜರಿಕೆಯಿಲ್ಲದೆ ತಕ್ಷಣ ತನ್ನ ಸಂಬಂಧಿಯನ್ನು ಪದೇ ಪದೇ ಕಪಾಳಮೋಕ್ಷ ಮಾಡುತ್ತಾಳೆ. ಆತನ ಕೃತ್ಯಕ್ಕೆ ಕಿರುಚಾಡುತ್ತಾ ಹೊಡೆದದ್ದು ಅಲ್ಲಿ ನೆರೆದಿದ್ದವರನ್ನೆಲ್ಲಾ ಬೆಚ್ಚಿಬೀಳಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಒಮ್ಮೆಲೆ ಭಾರೀ ಚರ್ಚೆಗೆ ಕಾರಣವಾಯಿತು. ವಧುವಿನ ಪ್ರತಿಕ್ರಿಯೆಗೆ ಅಗಾಧವಾಗಿ ಬೆಂಬಲ ನೀಡಿದರೆ ಕೆಲವರು ಇದು ಪೂರ್ವನಿಯೋಜಿತ ರೀಲ್ಸ್ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read