ನೋಟು ಎಣಿಸಲು ವಿಫಲನಾದ ವರ; ಮದುವೆ ಮುರಿದುಕೊಂಡ ವಧು…!

ವರ ಕುಡಿದು ಬಂದಿದ್ದು ಸೇರಿದಂತೆ ಈ ಹಿಂದೆ ಹಲವು ಕಾರಣಗಳಿಗಾಗಿ ಮದುವೆ ರದ್ದುಗೊಂಡಿರುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ಪ್ರಕರಣದಲ್ಲಿ ವರನಿಗೆ ನೋಟು ಎಣಿಸಲು ಬರಲಿಲ್ಲವೆಂಬ ಕಾರಣಕ್ಕೆ ವಧು ಮದುವೆ ಮುರಿದುಕೊಂಡಿದ್ದಾಳೆ.

ಹೌದು, ಇಂತಹದೊಂದು ಘಟನೆ ಉತ್ತರ ಪ್ರದೇಶದ ಫಾರೂಕಾ ಬಾದ್ನಲ್ಲಿ ನಡೆದಿದ್ದು ರೀಟಾ ಎಂಬ 21 ವರ್ಷದ ಯುವತಿಯ ಮದುವೆಯನ್ನು ನಿಶ್ಚಯಿಸಲಾಗಿದ್ದು, ಮದುವೆ ಕಾರ್ಯಗಳು ನಡೆಯುವಾಗ ಪುರೋಹಿತರು ಹುಡುಗನ ವಿಲಕ್ಷಣ ಲಕ್ಷಣಗಳನ್ನು ಗುರುತಿಸಿದ್ದಾರೆ.

ತಕ್ಷಣವೇ ಅವರು ಈ ವಿಚಾರವನ್ನು ವಧು ಹಾಗೂ ಆಕೆಯ ಕುಟುಂಬಸ್ಥರಿಗೆ ತಿಳಿಸಿದ್ದು, ಆಗ ಅವನನ್ನು ಪರೀಕ್ಷಿಸಲು ಮುಂದಾಗಿದ್ದಾರೆ. ವರನ ಕೈಗೆ ಹತ್ತು ರೂಪಾಯಿ ಮುಖಬೆಲೆಯ 30 ನೋಟುಗಳನ್ನು ನೀಡಿ ಎಣಿಸುವಂತೆ ಸೂಚಿಸಿದ್ದು, ಅದರಲ್ಲಿ ಅವನು ವಿಫಲನಾಗಿದ್ದಾನೆ. ಆ ಬಳಿಕ ವಧು ತನ್ನ ಮದುವೆಯನ್ನು ಮುರಿದುಕೊಂಡಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read