BREAKING: ಜನರ ಕಷ್ಟ ಅರ್ಥಮಾಡಿಕೊಳ್ಳದ, ವಾಸ್ತವ ಬದುಕಿನಿಂದ ದೂರವಿರುವ ವ್ಯಕ್ತಿ ಟಿವಿಕೆ ವಿಜಯ್: ಚೇತನ್ ಅಹಿಂಸಾ ಆರೋಪ

ಟಿವಿಕೆ ಪಕ್ಷದ ಸಂಸ್ಥಾಪಕ, ನಟ ವಿಜಯ್ ಜನರ ಕಷ್ಟ ಅರ್ಥಮಾಡಿಕೊಳ್ಳದ, ವಾಸ್ತವ ಬದುಕಿನಿಂದ ದೂರವಿರುವ ವ್ಯಕ್ತಿ ಎಂದು ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಆರೋಪಿಸಿದ್ದಾರೆ.

ನಟ ವಿಜಯ್, 41 ಮಂದಿ ಮೃತರ ಕುಟುಂಬಗಳನ್ನು ತಿಂಗಳು ಕಳೆದ ಮೇಲೆ ಮಾತ್ರ ಭೇಟಿಯಾಗ್ತಾರೆ. ಅದೂ ಆ ಕುಟುಂಬದವರು 400 ಕಿ.ಮೀಗೂ ಹೆಚ್ಚು ದೂರದ ಖಾಸಗಿ ರೆಸಾರ್ಟ್‌ಗೆ ಬಂದು ವಿಜಯನ್ನು ಭೇಟಿಯಾಗಬೇಕಾದ ಪರಿಸ್ಥಿತಿ! ಜನರ ನಿಜವಾದ ಕಷ್ಟಗಳನ್ನು ಅರ್ಥಮಾಡಿಕೊಳ್ಳದ, ವಾಸ್ತವ ಬದುಕಿನಿಂದ ದೂರವಾದ ವ್ಯಕ್ತಿ ವಿಜಯ್ ಎಂದು ಟೀಕಿಸಿದ್ದಾರೆ.

ಟಿವಿಕೆ(TVK) ನಿರೀಕ್ಷೆಯಂತೆಯೇ ಜನಪರ ರಾಜಕೀಯ ಪರ್ಯಾಯವಲ್ಲ, ವಿಜಯ್‌ನ ವೈಯಕ್ತಿಕ ಈಗೋ ಪ್ರಯಾಣ ಮಾತ್ರ. ಜನರ ಹೋರಾಟಗಳಿಂದ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿರುವ ವ್ಯಕ್ತಿಯನ್ನು ವಿಜಯ್ ಪ್ರತಿನಿಧಿಸುತ್ತಾನೆ. ಟಿವಿಕೆ ವಿಜಯ್ ಸಂತ್ರಸ್ತರ ಭೇಟಿ ಕಾರ್ಯಸಾಧ್ಯವಾದ ರಾಜಕೀಯ ಪರ್ಯಾಯಕ್ಕಿಂತ ವೈಯಕ್ತಿಕ ಅಹಂಕಾರದ ಪ್ರವಾಸವಾಗಿದೆ ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read