ಬೆಂಗಳೂರು: ಮೂರು ಅಂತಸ್ತಿನ ಫಿಟ್ನೆಸ್ ಸೆಂಟರ್ ಕಟ್ಟಡದಿಂದ ಬಿದ್ದು ಯುವತಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆಯಲ್ಲಿ ಘಟನೆ ನಡೆದಿದೆ.
ಜುನಿಪರ್ ಫಿಟ್ನೆಸ್ ಸೆಂಟರ್ ಕಟ್ಟಡದಿಂದ ಬಿದ್ದು 20 ವರ್ಷದ ರಕ್ಷಿತಾ ಸಾವನ್ನಪ್ಪಿದ್ದಾರೆ. ಎಂಟು ತಿಂಗಳಿಂದ ರಕ್ಷಿತಾ ಕೆಲಸ ಮಾಡುತ್ತಿದ್ದರು.
ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ರಕ್ಷಿತಾ ಇದ್ದಕ್ಕಿದ್ದಂತೆ ಮೂರನೇ ಮಹಡಿಯಲ್ಲಿದ್ದ ಫಿಟ್ನೆಸ್ ಸೆಂಟರ್ ಕಟ್ಟಡದಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮಾದನಾಯಕನಹಳ್ಳಿ, ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.