ಶಿವಮೊಗ್ಗ: ಎಣ್ಣೆ ಪಾರ್ಟಿ ವೇಳೆ ಸ್ನೇಹಿತರ ನಡುವೆ ಜಗಳವಾಗಿ ಯುವಕನನ್ನು ಕೊಲೆ ಮಾಡಲಾಗಿದೆ. ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆಯಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.
ಮಚ್ಚಿನಿಂದ ಹಲ್ಲೆ ನಡೆಸಿ 28 ವರ್ಷದ ಪವನ್ ಕೊಲೆ ಮಾಡಲಾಗಿದೆ. ಆರೋಪಿ ಶಿವಮೊಗ್ಗದ ಶಿವಕುಮಾರ್ ಪರಾರಿಯಾಗಿದ್ದಾನೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೊಮ್ಮನಕಟ್ಟೆ ಇ ಬ್ಲಾಕ್ ನಿವಾಸಿ ಪವನ್ ಕೊಲೆಯಾದ ಯುವಕ. ರಾತ್ರಿ ಸ್ನೇಹಿತ ಶಿವಕುಮಾರ್ ಮನೆಯಲ್ಲಿ ಪಾರ್ಟಿಗೆ ತೆರಳಿದ್ದ ಮದ್ಯ ಸೇವಿಸಿದ ನಂತರ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಗಲಾಟೆಯ ವೇಳೆ ಪವನ್ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ವಿನೋಬನಗರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.