ಬಾಗಲಕೋಟೆ: ರೈಲ್ವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವನ್ನಪ್ಪಿದ ಘಟನೆ ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಗ್ರಾಮದ ಸಮೀಪ ನಡೆದಿದೆ.
ರೈಲ್ವೆ ಅಂಡರ್ ಪಾಸ್ ನಲ್ಲಿ ತಡೆಗೋಡೆ ನಿರ್ಮಿಸುವಾಗ ಘಟನೆ ನಡೆದಿದೆ. ನಿಡಗುಂದಿ ಗ್ರಾಮದ ಕಾರ್ಮಿಕ ರುದ್ರೇಶ್ ನಿಡಗುಂದಿ(41) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಜೆಸಿಬಿ ಮೂಲಕ ಕಾರ್ಮಿಕ ರುದ್ರೇಶ್ ಅವರ ಶವವನ್ನು ಸಿಬ್ಬಂದಿ ಹೊರಗೆ ತೆಗೆದಿದ್ದಾರೆ.
ಮಣ್ಣು ಕುಸಿದು ಕಾರ್ಮಿಕರಾದ ಹನುಮಂತ ವಾಲೀಕಾರ, ಭೀಮಶೀ ಮಾದರ ಅವರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಜಯಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ