ಹಾಸನ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ ಪತ್ನಿ ಸೇರಿ ಮೂವರನ್ನು ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
36 ವರ್ಷದ ಮಧು ಕೊಲೆಯಾದ ವ್ಯಕ್ತಿ. ಜುಲೈ 5ರಂದು ಮಧುನನ್ನು ಕೊಲೆ ಮಾಡಿ ಶವ ಬಿಸಾಡಿದ್ದರು. ಕೊಲೆಯಾಗಿದ್ದ ಮಧು ಪತ್ನಿ ಭವ್ಯಾ, ಆಕೆಯ ತಾಯಿ ಜಯಂತಿ ಹಾಗೂ ಪ್ರಿಯಕರ ಮೋಹನ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಪ್ರಿಯಕರನ ಜೊತೆ ಸೇರಿ ಭವ್ಯಾ ಪತಿಯನ್ನು ಕೊಲೆ ಮಾಡಿ ಶವ ಎಸೆದಿದ್ದು, ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು.
ಹಾಸನ ಜಿಲ್ಲೆಯ ಆಲೂರು ಮೂಲದ ಮೋಹನ್ ಕುಮಾರ್ ಜೊತೆಗೆ ಕಳೆದ ಎರಡು ವರ್ಷದಿಂದ ಭವ್ಯಾ ಅಕ್ರಮ ಸಂಬಂಧ ಬೆಳೆಸಿದ್ದಳು. ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದು ಪತಿ ಮಧು ಕೊಲೆ ಮಾಡಿದ್ದರು. ಮಧುಗೆ ಕಂಠಪೂರ್ತಿ ಮದ್ಯ ಕುಡಿಸಿ ಉಸಿರುಗಟ್ಟಿಸಿ ಮೋಹನ್ ಕೊಲೆ ಮಾಡಿದ್ದ. ಹೂವಿನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 376ರ ಬಳಿ ಮೃತದೇಹವನ್ನು ಎಸೆದಿದ್ದರು. ಅಪಘಾತದಲ್ಲಿ ಮಧು ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದರು.
ಮಗ ಮಧು ಹತ್ಯೆಯ ಸಂಬಂಧ ತಾಯಿ ರುಕ್ಮಿಣಿ ದೂರು ನೀಡಿದ್ದರು. ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಮಧು ಪತ್ನಿ ಭವ್ಯಾ, ತಾಯಿ ಜಯಂತಿ ಮತ್ತು ಪ್ರಿಯಕರ ಮೋಹನ್ ಅವರನ್ನು ಬಂಧಿಸಲಾಗಿದೆ.