BREAKING : ಬಾಂಗ್ಲಾದೇಶದಲ್ಲಿ ಮುಂದುವರೆದ ‘ಹಿಂಸಾಚಾರ’ ; ಖ್ಯಾತ ನಟ ಹಾಗೂ ಆತನ ತಂದೆಯ ಬರ್ಬರ ಹತ್ಯೆ..!

ದೇಶದಲ್ಲಿ ಭಾರಿ ಅಶಾಂತಿಯ ನಡುವೆ ಬಾಂಗ್ಲಾದೇಶದ ನಟ ಮತ್ತು ಅವರ ತಂದೆಯನ್ನು ಥಳಿಸಿ ಹತ್ಯೆ ಮಾಡಲಾಗಿದೆ.

ಬಾಂಗ್ಲಾದೇಶದ ಖ್ಯಾತ ನಿರ್ಮಾಣ ಸಂಸ್ಥೆಯ ಮಾಲೀಕ ನಟ ಶಾಂಟೋ ಖಾನ್ ಮತ್ತು ಅವರ ತಂದೆ ಸೆಲೀಮ್ ಖಾನ್ ಅವರನ್ನು ಗುಂಪೊಂದು ಹತ್ಯೆ ಮಾಡಿದೆ ಎಂದು ವರದಿ ತಿಳಿಸಿದೆ.

ತಂದೆ-ಮಗನ ಕ್ರೂರ ಹತ್ಯೆಯ ಹಿಂದೆ ಯಾವುದೇ ದೃಢಪಡಿಸಿದ ಕಾರಣಗಳಿಲ್ಲ. ಸೆಲೀಮ್ ಖಾನ್ ಅವಾಮಿ ಲೀಗ್ ಉಚ್ಛಾಟಿತ ನಾಯಕ ಎಂದು ವರದಿಯಾಗಿದೆ, ಅದರ ಬೆಂಬಲಿಗರು ಇತ್ತೀಚಿನ ವಾರಗಳಲ್ಲಿ ಹಿಂಸಾತ್ಮಕ ಸರ್ಕಾರಿ ವಿರೋಧಿ ಪ್ರದರ್ಶನಗಳ ನಡುವೆ ನಿರಂತರ ದಾಳಿ ನಡೆಸುತ್ತಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿ ತಮ್ಮ ಸಹೋದರಿಯೊಂದಿಗೆ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಶೇಖ್ ಹಸೀನಾ ಫಲಾಯನದ ನಂತರವೂ ಕೂಡ ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಿಂತಿಲ್ಲ. ಬಾಂಗ್ಲಾದೇಶದಲ್ಲಿ ಸಾವಿನ ಸಂಖ್ಯೆ 400 ಕ್ಕೆ ಏರಿಕೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read