BREAKING : ಸಂಜೆ 5.44 ರಿಂದ `ವಿಕ್ರಮ್ ಲ್ಯಾಂಡರ್’ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭ : ಈ ಲಿಂಕ್ ಮೂಲಕ ನೇರ ಪ್ರಸಾರ ವೀಕ್ಷಣೆ ಮಾಡಿ

ಬೆಂಗಳೂರು : ಭಾರತೀಯ ಬಾಹ್ಯಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಲು ಹಂತಿಮ ಹಂತಕ್ಕೆ ಬಂದಿದ್ದು, ಸಂಜೆ 5.44 ರಿಂದ ವಿಕ್ರಮ್ ಲ್ಯಾಂಡರ್ ನ ವೇಗ ತಗ್ಗಿಸುವ ಪ್ರಕ್ರಿಯೆ ಆರಂಭವಾಗಲಿದೆ.

ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಸಮೀಪವನ್ನು ತಲುಪಿದ್ದು, ಸಂಜೆ 6.04 ಗಂಟೆ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಸಜ್ಜಾಗಿದೆ. ಅದಕ್ಕೂ ಮುನ್ನ ವಿಕ್ರಮ್ ಲ್ಯಾಂಡರ್ ನ ವೇಗವನ್ನು ತಗ್ಗಿಸುವ ಕಾರ್ಯ ಸಂಜೆ 5.44ರಿಂದಲೇ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭವಾಗಲಿದೆ.

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಯೋಜನೆ ಬಹುತೇಕ ಯಶಸ್ವಿಯ ಹಂತದಲ್ಲಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂದರೆ ಇಂದು ಸಂಜೆ 6 ಗಂಟೆ 4 ನಿಮಿಷ ಸುಮಾರಿಗೆ ಚಂದ್ರಯಾನದ ನೌಕೆ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ.

ಚಂದ್ರಯಾನ 3 ರ ಲೈವ್ ಲ್ಯಾಂಡಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?

https://www.isro.gov.in/LIVE_telecast_of_Soft_landing.html?tag=times_of_india_web-21  ಮೂಲಕ ಚಂದ್ರಯಾನ 3 ಯನ್ನು ನೀವು ಲೈವ್ ಆಗಿ ವೀಕ್ಷಣೆ ಮಾಡಬಹುದು.

ಆಗಸ್ಟ್ 23 ರಂದು ಇಂದು ಸಂಜೆ 5.27 ಕ್ಕೆ ಚಂದ್ರಯಾನ -3 ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯನ್ನು ಇಸ್ರೋ ವೆಬ್ಸೈಟ್, ಯೂಟ್ಯೂಬ್ ಚಾನೆಲ್ ಮತ್ತು ಡಿಡಿ ನ್ಯಾಷನಲ್ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಂಜೆ 5.15 ರಿಂದ 6.15 ರವರೆಗೆ ವಿಶೇಷ ತರಗತಿ ಆಯೋಜಿಸುವ ಮೂಲಕ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read