BREAKING : ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ‘ಏಕರೂಪದ ದರ’ ನಿಗದಿ : ಸಾರಿಗೆ ಇಲಾಖೆ ಆದೇಶ

ಬೆಂಗಳೂರು : ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ‘ಏಕರೂಪದ ದರ’ ನಿಗದಿ ಪಡಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಅಗ್ರಿಗೇಟರ್ಸ್ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರ ಮತ್ತು ಸಾಗಾಣಿಕ ದರಗಳನ್ನು ಏಕರೂಪಗೊಳಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಸಿಟಿ ಟ್ಯಾಕ್ಸಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ದರ ನಿಗಧಿಪಡಿಸಿ ಅಧಿಸೂಚನೆ ಹೊರಡಿಸಿದೆ.

ಏನಿದೆ ಆದೇಶದಲ್ಲಿ..?

1) 10 ಲಕ್ಷ ರೂ.ಗಿಂತ ಕಡಿಮೆ ಮೌಲ್ಯದ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 100 ರೂ. ನಿಗದಿ
2) 4 ಕಿಮೀ ನಂತರ ಪ್ರತಿ ಕಿಮೀಗೆ ಹೆಚ್ಚುವರಿ 24 ರೂ.ನಿಗದಿ
3) 10 ಲಕ್ಷದಿಂದ 15 ಲಕ್ಷ ರೂ.ವರೆಗಿನ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 115 ರೂ. ನಿಗದಿ
4)4 ಕಿಮೀ ನಂತರ ಪ್ರತಿ ಕಿಲೋ ಮೀಟರ್ಗೆ ಹೆಚ್ಚುವರಿ 32 ರೂ. ನಿಗದಿ

5 )4 ಕಿಮೀ ನಂತರ ಪ್ರತಿ 1 ಕಿಮೀಗೆ ಹೆಚ್ಚುವರಿ 28 ರೂ. ನಿಗದಿ
6) 15 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 130 ರೂ. ನಿಗದಿ

ಹೊಸ ನಿಯಮಗಳೇನು?
1) ವೈಯಕ್ತಿಕ ಲಗೇಜುಗಳಿಗೆ 120 ಕೆಜಿ ವರೆಗೆ ವಿನಾಯಿತಿ
2) ಮೊದಲ 5 ನಿಮಿಷ ಕಾಯುವಿಕೆಗೆ ಶುಲ್ಕ ಇಲ್ಲ
3) ಪ್ರಯಾಣಿಕರಿಂದ ಜಿಎಸ್ಟಿ, ಟೋಲ್ ವಸೂಲಿಗೆ ಅವಕಾಶ
4) ಬೆಳಗ್ಗಿನ ಜಾವ 6 ಗಂಟೆ ವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ 10% ಹೆಚ್ಚುವರಿ ದರ ವಿಧಿಸಲು ಅವಕಾಶ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read