BREAKING : ಬಿಹಾರದಲ್ಲಿ ಇಬ್ಬರು ದಲಿತ ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಓರ್ವ ಬಾಲಕಿ ಸಾವು

ಬಿಹಾರದ ಪಾಟ್ನಾದ ಹಿಂದೂನಿ ಬಧರ್ ಪ್ರದೇಶದಲ್ಲಿ ಇಬ್ಬರು ದಲಿತ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಘಟನೆಯಲ್ಲಿ ಓರ್ವ ಸಂತ್ರಸ್ತೆ ತೀವ್ರ ಗಾಯಗೊಂಡಿದ್ದು, ಇನ್ನೋರ್ವ ಬಾಲಕಿ ಮೃತಪಟ್ಟಿದ್ದಾಳೆ.

ಇಬ್ಬರೂ ಬಾಲಕಿಯರು ಸೋಮವಾರ ಹಸುವಿನ ಸಗಣಿ ಸಂಗ್ರಹಿಸಲು ಒಟ್ಟಿಗೆ ಹೊರಕ್ಕೆ ಹೋಗಿದ್ದರು, ಆದರೆ ಮನೆಗೆ ಮರಳಿರಲಿಲ್ಲ ಎಂದು ಕುಟುಂಬಗಳು ತಿಳಿಸಿವೆ.

ಮಂಗಳವಾರ ಅಪ್ರಾಪ್ತ ಬಾಲಕಿಯರಲ್ಲಿ ಒಬ್ಬಳ ಶವ ಪತ್ತೆಯಾಗಿದೆ. ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದೆ.
ಘಟನೆಯ ಬಗ್ಗೆ ಮಾತನಾಡಿದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ವಿಕ್ರಮ್ ಸಿಹಾಗ್, “ಇಬ್ಬರು ಅಪ್ರಾಪ್ತರು ಸೋಮವಾರ ನಾಪತ್ತೆಯಾಗಿದ್ದಾರೆ. ಮಂಗಳವಾರ ಮುಂಜಾನೆ ಕಾಣೆಯಾದ ಹುಡುಗಿಯರ ಬಗ್ಗೆ ಮಾಹಿತಿ ಸಿಕ್ಕಿತು, ಅದರಲ್ಲಿ ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಗಾಯಗೊಂಡ ಅಪ್ರಾಪ್ತ ಬಾಲಕಿಯನ್ನು ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಏಮ್ಸ್ ಗೆ ದಾಖಲಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read