ಉಡುಪಿ : ಉಡುಪಿಯಲ್ಲಿ ಘೋರ ದುರಂತ ಸಂಭವಿಸಿದ್ದು, ಸಮುದ್ರದಲ್ಲಿ ನಾಡದೋಚಿ ಮಗುಚಿಬಿದ್ದು ಮೂವರು ಮೀನುಗಾರರು ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಸುರೇಶ್ ಖಾರ್ವಿ, ರೋಹಿತ್ ಖಾರ್ವಿ, ಜಗ್ಗು ಎಂದು ಗುರುತಿಸಲಾಗಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ಒಬ್ಬರನ್ನು ರಕ್ಷಿಸಲು ಮತ್ತೊಬ್ಬರು ಹೋಗಿ ಮೂವರು ಕೂಡ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.