ಮೈಸೂರು: ಮೈಸೂರಿನಲ್ಲಿ ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿಸಿ ಕಾರ್ಮಿಕ ಮೃತಪಟ್ಟಿದ್ದಾರೆ. ಶಿವು ನಾಯಕ(47) ಮೃತಪಟ್ಟವರು ಎಂದು ಹೇಳಲಾಗಿದೆ.
ಚಾಮರಾಜ ರೈಲು ನಿಲ್ದಾಣದ ಬಳಿ ಘಟನೆ ನಡೆದಿದೆ. ಅಶೋಕಪುರಂ ರೈಲ್ವೆ ವರ್ಕ್ ಶಾಪ್ ನಿಂದ ನಿಲ್ದಾಣಕ್ಕೆ ಎಂಜಿನ್ ತೆರಳುತ್ತಿತ್ತು. ರೈಲಿನ ಎಂಜಿನ್ ಗೆ ಸಿಲುಕಿ ಕೂಲಿ ಕಾರ್ಮಿಕ ಶಿವು ನಾಯಕ ಸಾವನ್ನಪ್ಪಿದ್ದಾರೆ.
ಚಾಮರಾಜನಗರ ತಾಲೂಕಿನ ಹೆಗ್ಗೋಟಾಟಾ ನಿವಾಸಿಯಾಗಿರುವ ಶಿವುನಾಯಕ ಕೂಲಿ ಕೆಲಸಕ್ಕೆ ಮೈಸೂರಿಗೆ ಬಂದಿದ್ದು, ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
